ಕಲ್ಪಿಸುವ ವಿಧೇಯಕ ಜಾರಿಗೆ ಮುಂದಾಗುವ ಮೂಲಕಬಸವಣ್ಣನವರತತ್ತ್ವ ಪಾಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಅಂದಿನ ಕಾಲದಲ್ಲೇ ಬಸವಣ್ಣನವರು ಜಾತಿ ಪದ್ಧತಿ, ಮೇಲು ಕೀಳು ಹೋಗಲಾಡಿಸಲು ಹಗಲಿರುಳು ಶ್ರಮಿಸಿದ್ದಾರೆ. ಬಸವಣ್ಣನವರ ವಿಚಾರದಂತೆಯೇ ಕೆಎಲ್‌ಇ ಸಂಸ್ಥೆ ಜಾತ್ಯತೀತ ಅಭಿಮತ ಶಿಕ್ಷಣ ನೀಡುತ್ತಿದೆ. ಇಂದು ನಡೆದ ವಚನೋತ್ಸವದಲ್ಲಿ ಎಲ್ಲ ಧರ್ಮದವರೂ ಭಾಗವಹಿಸಿದ್ದು ವಿಶೇಷ. ಬಸವಣ್ಣನವರ ವಚನಗಳನ್ನು ಪ್ರಚಾರ ಮಾಡುವುದರಲ್ಲಿ ಕೆಎಲ್‌ಇ ಸಂಸ್ಥೆ ಮುಂಚೂಣಿಯಲ್ಲಿರುವುದು ಸಂತಸ ತಂದಿದೆ ಎಂದು ಹೇಳಿದರು.