ಬಸವಣ್ಣನವರ ತತ್ವ ಮಾನವ ಏಳಿಗೆ ಸೂತ್ರ

ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಶೀಲ್​ ನಮೋಶಿ ಮಾತನಾಡಿದರು. ಉದಯಕುಮಾರ ಚಿಂಚೋಳಿ, ರಾಜಾ ಭೀಮಳ್ಳಿ, ಅರುಣಕುಮಾರ ಪಾಟೀಲ್​ ಇದ್ದರು.
ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಶೀಲ್​ ನಮೋಶಿ ಮಾತನಾಡಿದರು. ಉದಯಕುಮಾರ ಚಿಂಚೋಳಿ, ರಾಜಾ ಭೀಮಳ್ಳಿ, ಅರುಣಕುಮಾರ ಪಾಟೀಲ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವೇಶ್ವರ ಆಸ್ಪತ್ರೆಯಲ್ಲಿ ಬಸವ ಜಯಂತಿ ಆಚರಣೆ
ಕಲಬುರಗಿ: ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ಕಾಯಕ ಯೋಗಿ ಬಸವಣ್ಣನವರಂತಹ ಮಹನೀಯರ ತತ್ವಾದರ್ಶಗಳಿಂದ ಸಮಾಜದ ಏಳಿಗೆ ಸಾಧ್ಯ. ಎಲ್ಲ ಜಾತಿ, ಧರ್ಮವನ್ನು 12ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಒಂದುಗೂಡಿಸಿ ವೈಚಾರಿಕ ಕ್ರಾಂತಿ ಮೂಲಕ ಮನುಕುಲಕ್ಕೆ ಸಮಾನತೆ ಸಂದೇಶ ಸಾರಿದ ಮಹಾಪುರಷ ಎಂದು ಹೈದರಾಬಾದ್​ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ , ವಿಧಾನ ಪರಿಷತ್​ ಸದಸ್ಯ ಶಶೀಲ್​ನಮೋಶಿ ಬಣ್ಣಿಸಿದರು.
ಹೈದರಾಬಾದ್​ ಕರ್ನಾಟಕ ಶಿಣಕ್ಷ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಬಸವ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂದು ಹೇಳಿದ ಅಣ್ಣ ಬಸವಣ್ಣನವರು ಪ್ರತಿಯೊಬ್ಬರೂ ಕಡ್ಡಾಯವಾಗಿ ದುಡಿಯಬೇಕು, ದುಡಿಮೆ ದೇವರಿಗೆ ಸಮಾನ. ಯಾವುದೇ ಕೆಲಸವೂ ಸಣ್ಣದಲ್ಲ ಅಥವಾ ದೊಡ್ಡದಲ್ಲ ಎಂಬುದಾಗಿ ಪ್ರತಿಪಾದಿಸಿದರು ಎಂದು ಹೇಲಿದರು.
ಭಾರತ ದೇಶ ಪ್ರಗತಿಯತ್ತ ಮುನ್ನಡೆಯಬೇಕಾದರೆ ನಮ್ಮ ಸಮಾಜ ಹಾಗೂ ದೇಶದಲ್ಲಿನ ಮಹಿಳೆಯರಿಗೆ ಸಮಾನ ಅವಕಾಶ ಮಾಡಿಕೊಡಬೇಕಾಗಿದೆ. ಆಗ ಮಾತ್ರ ನಮ್ಮ ದೇಶ ಮುಂದುವರಿಯಲು ಸಾಧ್ಯವಾಗುತ್ತದೆ. ಬಸವಣ್ಣನವರು ಮಹಿಳೆಯರಿಗೆ ಸಮಾನತೆ ನೀಡಿದದರು. ಬಸವಣ್ಣನವರ ತತ್ವ ನಾವೆಲ್ಲರೂ ಪಾಲಿಸಿದಾಗ ಸಂಸ್ಥೆಯು ಸದೃಢವಾಗಿ ಬೆಳೆಯುತ್ತದೆ ಎಂದು ಹೇಳಿದರು.
ಉಪಾಧ್ಯ ರಾಜಾ ಭೀಮಳ್ಳಿ ಮಾತನಾಡಿದರು. ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಸ ಪಾಟೀಲ್​, ಆಡಳಿತ ಮಂಡಳಿಯ ಸದಸ್ಯ ಡಾ.ಕಿರಣ ದೇಶಮುಖ, ವೈದ್ಯಕಿಯ ಕಾಲೇಜಿನ ಸಂಚಾಲಕ ಡಾ.ಶರಣಬಸಪ್ಪ ಹರವಾಳ, ಡೀನ್​ ಡಾ.ಶರಣಗೌಡ ಪಾಟೀಲ, ಡಾ.ವಿ.ಎಸ್​.ಕಪ್ಪಿಕೇರಿ, ಡಾ.ಮಲ್ಲಿಕಾರ್ಜುನ ತೆಗನೂರ, ಡಾ.ಪೂಜಾರಿ, ಡಾ.ಮಲ್ಲಿಕಾರ್ಜುನ ಭಂಡಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net