ಬಸವ ದರ್ಶನ ಪ್ರವಚನ ಏ.1 ರಿಂದ

ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಬಸವ ದರ್ಶನ ಪ್ರವಚನದ ಕರಪತ್ರ ಕಲಬುರಗಿಯ ಹಿರಿಯ ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್​ ಬಿಡುಗಡೆಗೊಳಿಸಿದರು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪಂಕಜಾ ಶಿವು ಲೋಖಂಡೆ, ರೇಖಾ ಶಿವರಾಜ ಮಹಾಜನ, ರೇಖಾಬಾಯಿ ರಾಜಶೇಖರ ಅಷ್ಟೂರೆ, ನಿರ್ಮಲಾ ಚಂದ್ರಕಾಂತ ಪಾಟೀಲ್​, ಶಾರದಾಬಾಯಿ ಬಾಬುರಾವ ಹುಣಜೆ, ಶಂಭುಲಿಂಗ ಕಾಮಣ್ಣ, ನಾಗಶೆಟ್ಟೆಪ್ಪ ಲಂಜವಾಡೆ, ಗುಂಡಪ್ಪ ಸಂಗಮಕರ್​ ಇತರರಿದ್ದರು.
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಬಸವ ದರ್ಶನ ಪ್ರವಚನದ ಕರಪತ್ರ ಕಲಬುರಗಿಯ ಹಿರಿಯ ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್​ ಬಿಡುಗಡೆಗೊಳಿಸಿದರು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪಂಕಜಾ ಶಿವು ಲೋಖಂಡೆ, ರೇಖಾ ಶಿವರಾಜ ಮಹಾಜನ, ರೇಖಾಬಾಯಿ ರಾಜಶೇಖರ ಅಷ್ಟೂರೆ, ನಿರ್ಮಲಾ ಚಂದ್ರಕಾಂತ ಪಾಟೀಲ್​, ಶಾರದಾಬಾಯಿ ಬಾಬುರಾವ ಹುಣಜೆ, ಶಂಭುಲಿಂಗ ಕಾಮಣ್ಣ, ನಾಗಶೆಟ್ಟೆಪ್ಪ ಲಂಜವಾಡೆ, ಗುಂಡಪ್ಪ ಸಂಗಮಕರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಸವಲಿಂಗ ಪಟ್ಟದ್ದೇವರು ಮಾಹಿತಿ
  • ಭಾಲ್ಕಿಯಲ್ಲಿ ಕರಪತ್ರ ಬಿಡುಗಡೆ
ಭಾಲ್ಕಿ: ಪಟ್ಟಣದಲ್ಲಿ ಏ.1 ರಿಂದ ಬಸವ ದರ್ಶನ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬಸವಣ್ಣನವರ ಜಯಂತಿ, ವಚನ ಜಾತ್ರೆ-2026, ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಮತ್ತು ಡಾ.ಬಸವಲಿಂಗ ಪಟ್ಟದ್ದೇವರ ನಿಮಿತ್ತ ಆಯೋಜಿಸಿದ್ದ ಬಸವ ದರ್ಶನ ಪ್ರವಚನದ ಕರಪತ್ರ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಏ.1 ರಿಂದ 20ರ ವರೆಗೆ ಪ್ರತಿದಿನ ಸಂಜೆ 6ಕ್ಕೆ ಪ್ರವಚನ ನಡೆಯಲಿದೆ. ಹಂದಿಗುಂದ ಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಬಸವ ದರ್ಶನ ವಿಷಯದ ಮೇಲೆ ಪ್ರವಚನದ ಮೂಲಕ ಜ್ಞಾನ ಧಾರೆಯರೆಲಿದ್ದಾರೆ ಎಂದರು.
ಬಸವತತ್ವ ಪ್ರಸಾರ ಮಾಡುವುದೇ ನಮ್ಮ ಮೂಲ ಉದ್ದೇಶವಾಗಿದೆ. ಅದಕ್ಕಾಗಿ ಈ ವರ್ಷ ಬಸವದರ್ಶನ ಪ್ರವಚನವನ್ನು ಏರ್ಪಡಿಸಲಾಗಿದೆ. ಅದಕ್ಕಾಗಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತಾವೆಲ್ಲರೂ ಪ್ರಯತ್ನಸಬೇಕು. ಇಂದಿನ ದಿನಮಾನಗಳಲ್ಲಿ ಮನೆ ಮನೆ ಹೋಗಿ ಆಮಂತ್ರಣ ನೀಡುವ ಅನಿವಾರ್ಯತೆ ಉಂಟಾಗಿದೆ. ಧರ್ಮ ಕಾರ್ಯಕ್ಕಾಗಿ ದುಡಿದವರಿಗೆ ದೇವರ ಕರುಣೆ ಆಗುತ್ತದೆ. ಬಸವಗುರುವಿನ ಕರುಣೆ ಆಗಬೇಕಾದರೆ ನಾವು ಬಸವಕಾರ್ಯಕ್ಕೆ ದುಡಿಯುವುದನ್ನು ಕಲಿಯಬೇಕು. ಬಸವತತ್ವ ಪ್ರಸಾರದ ಕಳಕಳಿ ನಮ್ಮಲ್ಲಿ ಇರಬೇಕು. ನಮ್ಮ ಕೌಟುಂಬಿಕ ಕಾರ್ಯಕ್ಕಾಗಿ ನಾವು ಎಲ್ಲರಿಗೆ ಹೇಗೆ ಪ್ರೀತಿಯಿಂದ ಆಮಂತ್ರಿಸುತ್ತೇವೆ ಅದೇ ರೀತಿ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಸಮಯ ನೀಡಿದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಕಲಬುರಗಿಯ ಹಿರಿಯ ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್​ ಕರಪತ್ರ ಬಿಡುಗಡೆಗೊಳಿಸಿದರು.
ಪ್ರವಚನ ಸೇವಾ ಸಮಿತಿ ಅಧ್ಯೆ ಪಂಕಜಾ ಶಿವು ಲೋಖಂಡೆ, ರೇಖಾ ಶಿವರಾಜ ಮಹಾಜನ, ರೇಖಾಬಾಯಿ ರಾಜಶೇಖರ ಅಷ್ಟೂರೆ, ನಿರ್ಮಲಾ ಚಂದ್ರಕಾಂತ ಪಾಟೀಲ್​, ಶಾರದಾಬಾಯಿ ಬಾಬುರಾವ ಹುಣಜೆ, ಸುನೀತಾ ಮಹಾದೇವಪ್ಪ ಮಮ್ಮಾ, ರುದ್ರಾಣಿ ವಿಲಾಸ ಬಕ್ಕಾ, ಸುವರ್ಣಾ ಓಂಕಾರ ಬಲ್ಲೂರೆ, ಪ್ರೇಮಲಾ ಶರಣಪ್ಪ ತೊಂಡಾರೆ, ವನೀತಾ ಶಿವಕುಮಾರ ಪಾಟೀಲ, ಬಸಮ್ಮತಾಯಿ, ಶಂಭುಲಿಂಗ ಕಾಮಣ್ಣ, ನಾಗಶೆಟ್ಟೆಪ್ಪ ಲಂಜವಾಡೆ, ಗುಂಡಪ್ಪ ಸಂಗಮಕರ್​, ಶಾಂತಯ್ಯ ಸ್ವಾಮಿ, ರಾಜು ಜುಬರೆ, ಮಲ್ಲಿಕಾರ್ಜುನ ಹುಣಜೆ ಇತರರಿದ್ದರು. ದೀಪಕ ಠಮಕೆ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net