ಕರೆ ಮಾಡಿದ ರಾಜೀವ್ ಗೌಡ, ಮೇಡಂ ನೀವು ಬ್ಯಾನರ್ ಬಿಚ್ಚೋಕೆ ಹೇಳಿದ್ರಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ನೀಡಿದ ಅಮೃತಾ, ಇಲ್ಲ ಸರ್ ಒಂದು ಬ್ಯಾನರ್ ಮಾತ್ರ ರಸ್ತೆಯ ಮಧ್ಯದಲ್ಲಿ ಹಾಕಿದ್ದರಂತೆ, ಅದು ವಾಹನಗಳಿಗೆ ಅಡ್ಡಿಯಾಗುತ್ತಿತ್ತಂತೆ. ಇದರಿಂದ ಅಪಘಾತಗಳು ಆಗುವ ಸಾಧ್ಯತೆ ಇತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರು ಅಂತ ನಾನು ಪಕ್ಕದಲ್ಲಿ ಬ್ಯಾನರ್ ಕಟ್ಟಿಕೊಳ್ಳಲು ಸೂಚನೆ ನೀಡಿದ್ದೆ ಎಂದು ಅಮೃತಾ ಹೇಳುತ್ತಾರೆ. ಇದಕ್ಕೆ ಏರು ಧ್ವನಿಯಲ್ಲಿ ಮಾತನಾಡುವ ರಾಜೀವ್, ಬ್ಯಾನರ್ ಬಿಚ್ಚಿದ್ದೀರಿ ಅಂತಾ ಏನಾದರೂ ಗೊತ್ತಾದ್ರೆ, ಬಂದು ಬೆಂಕಿ ಹಚ್ಚಿಸುತ್ತೇನೆ. ನೀವು ನನ್ನ ಒಳ್ಳೆಯತನ ನೋಡಿದ್ದೀರಿ ಆದರೆ, ಕೆಟ್ಟತನ ನೋಡಿಲ್ಲ ಎಂದು ಕಿಡಿಕಾರಿದರು.