Bank holidays in August 2026: ಸ್ವಾತಂತ್ರ್ಯ ದಿನಾಚರಣೆ, ಓಣಂ ಸೇರಿದಂತೆ ಎಷ್ಟು ದಿನ ಬ್ಯಾಂಕ್‌ ಕ್ಲೋಸ್?

Bank holidays in August 2026
Bank holidays in August 2026
Published on
ನೀವು ಆಗಸ್ಟ್​ನಲ್ಲಿ ಬ್ಯಾಂಕ್​ನಲ್ಲಿ ಕೆಲಸ ಇಟ್ಟುಕೊಂಡಿದ್ದರೆ, ಆದಷ್ಟು ಬೇಗನೆ ಅವುಗಳನ್ನು ಪೊರ್ಣಗೊಳಿಸೋದು ನೋಡಿಕೊಳ್ಳಿ. ಯಾಕೆಂದರೆ ಈ ಮಾಸದಲ್ಲಿ ಅರ್ಧಕ್ಕರ್ಧ ತಿಂಗಳು ರಜೆಗಳಿಂದ ತುಂಬಿ ಹೋಗಿವೆ. ಸ್ವಾತಂತ್ರ್ಯ ದಿನಾಚರಣೆ, ಎರಡನೇ ಶನಿವಾರ ಸೇರಿದಂತೆ ಆಗಸ್ಟ್​ನಲ್ಲಿ ಬರೋಬ್ಬರಿ 14 ದಿನ ರಜೆ ಇದೆ.

ಯಾವ್ಯಾವ ದಿನ ಬ್ಯಾಂಕ್​ ಇರೋದಿಲ್ಲ.

  • ಆಗಸ್ಟ್​ 2 ಭಾನುವಾರ ವಾರದ ರಜೆ
  • ಆಗಸ್ಟ್​ 8 ಎರಡನೇ ಶನಿವಾರ
  • ಆಗಸ್ಟ್​ 9 ಭಾನುವಾರ
  • ಆಗಸ್ಟ್​ 13 ಮಣಿಪುರದಲ್ಲಿ ದೇಶಪ್ರೇಮಿಗಳ ದಿನ
  • ಆಗಸ್ಟ್​​ 15 ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್​ 16 ಭಾನುವಾರ
  • ಆಗಸ್ಟ್ 22 ನಾಲ್ಕನೇ ಶನಿವಾರ
  • ಆಗಸ್ಟ್ 23 ಭಾನುವಾರ
  • ಆಗಸ್ಟ್​ 25 ಈದ್​ ಮಿಲಾದ್​, ಓಣಂ
  • ಆಗಸ್ಟ್​ 28 ರಕ್ಷಾ ಬಂಧನ
  • ಆಗಸ್ಟ್​ 30 ಭಾನುವಾರ

ಆನ್​ಲೈನ್​ ಬಳಿಸಿ

ಈ ಮೇಲಿನ ದಿನಗಳು ಬ್ಯಾಂಕ್​ಗೆ ಅಧಿಕೃತವಾಗಿ ಸರ್ಕಾರಿ ರಜೆ ಇದ್ದರೂ, ಸಹ ಹೆಚ್ಚು ಡಿಜಿಟಲ್​ನಲ್ಲಿ ವ್ಯವಹರಿಸುವ ಕೆಲಸಗಳನ್ನು ಇಟ್ಟುಕೊಳ್ಳಿ. ಯುಪಿಐ, ಆನ್​ಲೈನ್​ ಅಪ್ಲಿಕೇಶನ್​​, ಮೊಬೈಲ್​ ಬ್ಯಾಂಕಿಂಗ್​ಮೂಲಕ ನಿಮ್ಮ ತುರ್ತು ಕೆಲಸ ಮಾಡಿಕೊಳ್ಳಬಹುದು. ಅಲ್ಲದೆ ಎಲ್ಲ ಸರ್ಕಾರಿ ಬ್ಯಾಂಕ್​ಗಳ ಎಟಿಎಂ 24 ಗಂಟೆ ನಗರದಲ್ಲಿ ಕೆಲಸ ಮಾಡುವ ಹಿನ್ನೆಲೆ ತುರ್ತು ಪರಿಸ್ಥಿತಿ ಎದುರಾಗುವ ಯಾವ ಸಾಧ್ಯತೆ ಇರೋದಿಲ್ಲ. ಇಲ್ಲವೇ ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್​ಗಳ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿಕೊಂಡು ಆ ಮೂಲಕ ವ್ಯವಹರಿಸಬಹುದಾಗಿದೆ.

ರಜೆ ಪಟ್ಟಿ ನೋಡಿ

ಚೆಕ್​ ಠೇವಣಿ, ಕೆವೈಸಿ ನವೀಕರಿಸುವಾಗ ಅಥವಾ ಶಾಖೆಯಲ್ಲಿ ಯಾವುದಾದರು ಕೆಲಸದ ಮೇಲೆ ತೆರಳುತ್ತಿದ್ದೀರಿ ಎಂದರೆ ಮೊದಲು ರಜೆ ಪಟ್ಟಿಯನ್ನು ಪರಿಶೀಲಿಸಿ. ಯಾವುದರ ಬಗ್ಗೆ ಗಮನ ಹರಿಸದೆ ಬ್ಯಾಕ್​ ಬಳಿ ತೆರಳಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಿಕೊಳ್ಳಿ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net