ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಗುಣಮಟ್ಟದ ಶಿಕ್ಷಣ, ಪಾರದರ್ಶಕ ಆಡಳಿತ ಮತ್ತು ನಿರಂತರ ಸುಧಾರಣೆಯತ್ತ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿ, ಐಎಸ್‌ಒ (ಐಎಸ್‌ಒ 9001:2015) ಗುಣಮಟ್ಟ ನಿರ್ವಹಣಾ ವ್ಯವಸ್ಥೆ ( ಕ್ಯೂಎಂಎಸ್) ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಈ ಸಾಧನೆಯೊಂದಿಗೆ ಐಎಸ್‌ಒ ಪ್ರಮಾಣೀಕರಣ ಪಡೆದ ಮೊದಲ ಸಾರ್ವಜನಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.