ರಾಮನಗರ ಶೈಕ್ಷಣಿಕ ಜಿಲ್ಲೆಯ ಹೆಸರನ್ನು ಎಂದಿನಂತೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದೇ ಪರಿಗಣಿಸಬೇಕು. ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಕಚೇರಿಗಳು ಹಾಗೂ ಇಲಾಖೆಯ ಎಲ್ಲ ತಂತ್ರಾಂಶಗಳು, ವೆಬ್‌ಸೈಟ್‌ಗಳು, ದತ್ತಾಂಶ ನಿರ್ವಹಣಾ ವ್ಯವಸ್ಥೆಗಳಲ್ಲಿ, ಅಧಿಕೃತ ಪತ್ರ ವ್ಯವಹಾರಗಳೂ, ಸರ್ಕಾರಿ ಆದೇಶಗಳು, ಅಧಿಸೂಚನೆಗಳು, ಜ್ಞಾಪನೆಗಳು, ದಾಖಲೆಗಳು, ವರದಿಗಳು, ಮುದ್ರಿತ ನಮೂನೆಗಳು ಹಾಗೂ ಇತರೆ ಎಲ್ಲ ಅಧಿಕೃತ ದಾಖಲಾತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.