ಕಾರ್ಗೋ ಸೇವೆಯಲ್ಲೂ ಬೆಂಗಳೂರು ವಿಮಾನ ನಿಲ್ದಾಣ ಉತ್ತಮ ಸಾಧನೆ ಮಾಡಿದೆ. ಕಳೆದ ವರ್ಷ 5.32 ಲಕ್ಷ ಟನ್ ಸರಕು ಸಾಗಣೆ ನಡೆದಿದ್ದು, ಇದು 6 ಶೇಕಡಾ ಏರಿಕೆಯಾಗಿದೆ. ಔಷಧಿ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್, ಕೃಷಿ ಉತ್ಪನ್ನಗಳು, ವಾಹನ ಬಿಡಿಭಾಗಗಳು ಮತ್ತು ಇ-ಕಾಮರ್ಸ್ ಸರಕು ಸಾಗಣೆ ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ.