ಕೇಂದ್ರ ಸರ್ಕಾರದ ಸ್ವಚ್ಛತಾ ಯೋಜನೆಯ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬಂಡೀಪುರ ವಲಯದ ಅರಣ್ಯ ಸಿಬ್ಬಂದಿ ಬಂಡೀಪುರದಿಂದ ಮಂಗಲವರೆಗಿನ ಹಳ್ಳಿಗಳು ಹಾಗೂ ಕೆಕ್ಕನಹಳ್ಳಿ ಗೇಟ್‌ವರೆಗೆ ಪ್ರವಾಸಿಗರು ರಸ್ತೆಬದಿಯಲ್ಲಿ ಬೀಸಾಡಿದ್ದ ತಿಂಡಿ ತಿನಿಸುಗಳ ಕವರ್, ಖಾಲಿ ಬಾಟೆಲ್ ಹಾಗೂ ಮಂಗಲ ಡ್ಯಾಂವರೆಗೆ ಗಾಳಿಯಲ್ಲಿ ಹಾರಿಹೋಗಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿದರು. ಇಲಾಖೆಯ ಸಿಬ್ಬಂದಿ, ವಾಹನಗಳ ಚಾಲಕರು, ಅತಿಥಿಗೃಹಗಳ ಸಿಬ್ಬಂದಿ ಸೇರಿದಂತೆ ಅರಣ್ಯ ಇಲಾಖೆಯ ಒಟ್ಟು 16 ಸಿಬ್ಬಂದಿ ಪಾಲ್ಗೊಂಡಿದ್ದರು. ಸಂಗ್ರಹವಾದ ತ್ಯಾಜ್ಯವನ್ನು ಪಟ್ಟಣದ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಲಾಗಿದೆ ಎಂದು ಆರ್.ಎಫ್.ಒ ಎನ್.ಸಿ.ಮಹದೇವ ತಿಳಿಸಿದ್ದಾರೆ.