ಆನ್‌ಲೈನ್‌ನಲ್ಲಿ ಔಷಧ ಮಾರಾಟ ನಿಷೇಧಿಸಿ

ಕಂಪ್ಲಿ ಪೊಲೀಸ್ ಠಾಣಾಧಿಕಾರಿ ಒ.ರಮೇಶ್‌ಗೆ ತಾಲೂಕಿನ ಕೆಮಿಸ್ಟ್-ಡ್ರಗ್ಗಿಸ್ಟ್ ಅಸೋಷಿಯೇಷನ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಧ್ಯಕ್ಷ ಓದ್ಸೋ ರುದ್ರಯ್ಯ, ಪದಾಧಿಕಾರಿಗಳಾದ ಎಸ್.ಗೋವಿಂದರಾಜ್, ಬುಜ್ಜಿಕುಮಾರ್, ಎಸ್.ರಾಮು, ಎಸ್.ವೀರಯ್ಯ ಇತರರಿದ್ದರು.
ಕಂಪ್ಲಿ ಪೊಲೀಸ್ ಠಾಣಾಧಿಕಾರಿ ಒ.ರಮೇಶ್‌ಗೆ ತಾಲೂಕಿನ ಕೆಮಿಸ್ಟ್-ಡ್ರಗ್ಗಿಸ್ಟ್ ಅಸೋಷಿಯೇಷನ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಧ್ಯಕ್ಷ ಓದ್ಸೋ ರುದ್ರಯ್ಯ, ಪದಾಧಿಕಾರಿಗಳಾದ ಎಸ್.ಗೋವಿಂದರಾಜ್, ಬುಜ್ಜಿಕುಮಾರ್, ಎಸ್.ರಾಮು, ಎಸ್.ವೀರಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಮಿಸ್ಟ್-ಡ್ರಗ್ಗಿಸ್ಟ್ ಅಸೋಸಿಯೇಷನ್ ಆಗ್ರಹ
ಕಂಪ್ಲಿ: ಆನ್‌ಲೈನ್ ಮೂಲಕ ಔಷಧ ಮಾರಾಟ ನಿಷೇಧಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ಕೆಮಿಸ್ಟ್-ಡ್ರಗ್ಗಿಸ್ಟ್ ಅಸೋಸಿಯೇಷನ್ ಪದಾಧಿಕಾರಿಗಳು ಮಂಗಳವಾರ ಪೊಲೀಸ್ ಠಾಣಾಧಿಕಾರಿ ಒ.ರಮೇಶ್‌ಗೆ ಮನವಿ ಸಲ್ಲಿಸಿದರು. 
ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಓದ್ಸೋ ರುದ್ರಯ್ಯ ಮಾತನಾಡಿ, ದೇಶದಲ್ಲಿ ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಮಾರಾಟ, ವಿತರಕರಿಗೆೆ ಆರ್ಥಿಕ ನಷ್ಟ ಉಂಟಾಗುತ್ತಿದೆ. 
ಸುಮಾರು 12.40 ಲಕ್ಷ ಔಷಧ ವ್ಯಾಪಾರಿಗಳು, ವಿತರಕರು, ನಾಲ್ಕೈದು ಕೋಟಿ ಕುಟುಂಬಗಳು ಬೀದಿಗೆ ಬೀಳಲಿವೆ. ಗುಣಮಟ್ಟ ಇಲ್ಲದ ಔಷಧ ಮಾರಾಟ, ದರ ಪೈಪೋಟಿಯಿಂದ ವ್ಯಾಪಾರಿಗಳ ಮೇಲೆ ದುಷ್ಪಾರಿಣಾಮ ಬೀರುತ್ತಿದ್ದು, ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ಅನುಮತಿ ನೀಡಿರುವುದನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. 
ತಹಸೀಲ್ದಾರ್ ಜೂಗಲ ಮಂಜುನಾಯಕ, ಪುರಸಭೆ ಕಂದಾಯ ಅಧಿಕಾರಿ ಪ್ರಶಾಂತ್ ಚಿತ್ರಗಾರ್‌ಗೂ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಕನಕಾಚಲಪತಿ, ಎಸ್.ಗೋವಿಂದರಾಜ್, ಶಿವಕುಮಾರ್, ಎಸ್.ರಾಮು, ಎಸ್.ವೀರಯ್ಯ, ವಿಶ್ವನಾಥ, ಮೋಹನ್, ಮಾಲಾಯಾದ್ರಿ, ಬುಜ್ಜಿ, ದೇವರಾಜ, ಶರಣಪ್ಪ, ರಾಘವೇಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net