ಮತಪಟ್ಟಿ ಪರಿಸ್ಕರಣೆ ಅತ್ಯವಶ್ಯ

Ballot paper revision is essential.
Ballot paper revision is essential.
Published on
ಶಿರಾ: ಎಸ್​ಐಆರ್​ ಮತ ಪಟ್ಟಿ ಪರಿಸ್ಕರಣೆ ಅತ್ಯವಶ್ಯಕವಾಗಿದ್ದು, ಚುನಾವಣಾ ಆಯೋಗ ಕೈಗೊಂಡಿರುವ ಈ ಮಹತ್ವದ ಕೆಲಸದಲ್ಲಿ ಎಲ್ಲರೂ ಪಾಲ್ಗೊಂಡು ನಮ್ಮ ವೋಟು, ನಮ್ಮ ಹಕ್ಕು ಧ್ಯೇಯ ವಾಕ್ಯದೊಂದಿಗೆ ಮುನ್ನಡೆದು ಮತಪಟ್ಟಿ ಸಂಸ್ಕರಣ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಶಿರಾ ಜೆಡಿಎಸ್​ ನಾಯಕ ಆರ್​.ಉಗ್ರೇಶ್​ ಹೇಳಿದರು.
ತಾಲೂಕಿನ ಆದಲೂರು ಗ್ರಾಮದಲ್ಲಿ ಮತಪಟ್ಟಿ ಪರಿಷ್ಕರಣೆ ಅಧಿಕಾರಿಗಳಿಂದ ಮತನೋಂದಣಿ ಅರ್ಜಿ ಸ್ವೀಕರಿಸಿ ಮಾತನಾಡಿ, ಜೆಡಿಎಸ್​ ಪಕ್ಷ ಕೂಡ ಎಸ್​ಐಆರ್​ ಯಶಸ್ವಿಗೊಳಿಸಲು ಶಿರಾ ಕ್ಷೇತ್ರದಾದ್ಯಂತ 290 ಮತಗಟ್ಟೆಗಳಲ್ಲಿ ಪ್ರತಿನಿಧಿಗಳನ್ನು ನೇಮಕ ಮಾಡಿದ್ದು, ಇವರು ಕೂಡ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಿ ನೋಂದಣಿ ಕಾರ್ಯದಲ್ಲಿ ಸಹಾಯ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಶಿರಾ ವಿಧಾನಸಭಾ ಕ್ಷೇತ್ರ ಮತದಾರರ ನೋಂದಣಾಧಿಕಾರಿ ಕೆ.ರುದ್ರೇಶ್​ ಮಾತನಾಡಿ, ಮತಪಟ್ಟಿ ಪರಿಷ್ಕರಣೆ ಜೂ.30ರಿಂದ ಪ್ರಾರಂಭವಾಗಿದ್ದು ಜುಲೈ 29ರವರೆಗೂ ನಡೆಯಲಿದೆ. ತಾಲೂಕಿನ ಪ್ರತಿ ಬೂತ್​ಗೂ ಬಿಎಲ್​ಒಗಳನ್ನು ನೇಮಕ ಮಾಡಲಾಗಿದ್ದು, ಅವರು ಮನೆಮನೆಗೆ ಭೇಟಿ ನೀಡಿ ದ್ವಿಪ್ರತಿಯಲ್ಲಿ ಅರ್ಜಿ ನೀಡಲಿದ್ದಾರೆ. ಅರ್ಜಿಗಳನ್ನು ಪಡೆದು ಸೂಚಿಸಲಾಗಿರುವ ಮಾಹಿತಿ ಭರ್ತಿ ಮಾಡಿ ಬಿಎಲ್​ಒಗಳಿಗೆ ಹಿಂತಿರುಗಿಸಬೇಕು. ಒಂದು ಪ್ರೀತಿಯನ್ನು ತಮ್ಮ ಬಳಿ ಇಟ್ಟು ಕೊಳ್ಳಬೇಕು. ಚುನಾವಣಾ ಆಯೋಗ ಕೈಗೊಂಡಿರುವ ಮತಪಟ್ಟಿ ಪರಿಷ್ಕರಣೆ ಎಸ್​ಐಆರ್​ ಬಗ್ಗೆ ಮತದಾರರು ಯಾವುದೇ ಗೊಂದಲಗಳಿಗೆ ಈಡಾಗದೇ ಅರ್ಜಿ ಭರ್ತಿ ಮಾಡಿ ನೀಡಬೇಕು ಎಂದು ತಿಳಿಸಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net