ಹೆರಿಗೆ ವೇಳೆ ಶಿಶು ಸಾವು, ತಾಯಿ ಬಚಾವ್​

ಆಳಂದ ತಾಲೂಕಿನ ಭೂಸನೂರ ಪಿಎಚ್​ಸಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ರ್ನಿಲಕ್ಷ$್ಯದಿಂದ ಶಿಶು(ಮಗು) ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಂಬಂಧಿಕರು ಪ್ರತಿಭಟನೆ ನಡೆಸಿ ಪ್ರಭಾರಿ ಟಿಎಚ್​ಒ ಡಾ.ಉಸ್ಮಾನ್​ ಸುತಾರ ಅವರಿಗೆ ಮನವಿಪತ್ರ ಸಲ್ಲಿಸಿದರು. ಮುತ್ತಣ್ಣ ಬೀಳಗಿ, ಶಾಂತಪ್ಪ ಮೈನಾಳ, ಗುಂಡಪ್ಪ ಪೂಜಾರಿ, ಮಲ್ಲಿನಾಥ ಅರಳಗುಂಡಗಿ ಇತರರಿದ್ದರು.
ಆಳಂದ ತಾಲೂಕಿನ ಭೂಸನೂರ ಪಿಎಚ್​ಸಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ರ್ನಿಲಕ್ಷ$್ಯದಿಂದ ಶಿಶು(ಮಗು) ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಂಬಂಧಿಕರು ಪ್ರತಿಭಟನೆ ನಡೆಸಿ ಪ್ರಭಾರಿ ಟಿಎಚ್​ಒ ಡಾ.ಉಸ್ಮಾನ್​ ಸುತಾರ ಅವರಿಗೆ ಮನವಿಪತ್ರ ಸಲ್ಲಿಸಿದರು. ಮುತ್ತಣ್ಣ ಬೀಳಗಿ, ಶಾಂತಪ್ಪ ಮೈನಾಳ, ಗುಂಡಪ್ಪ ಪೂಜಾರಿ, ಮಲ್ಲಿನಾಥ ಅರಳಗುಂಡಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆರಳಿದ ಸಂಬಂಧಿಕರಿಂದ ಪ್ರತಿಭಟನೆ
  • ಭೂಸನೂರ ಪಿಎಚ್​ಸಿ ಸಿಬ್ಬಂದಿ ಅಮಾನತಿಗೆ ಆಗ್ರಹ
ಆಳಂದ: ಹೆರಿಗೆ ವೇಳೆ ಶಿಶು ಮೃತಪಟ್ಟಿರುವುದಕ್ಕೆ ವೈದ್ಯರ ರ್ನಿಲ$್ಯವೇ ಕಾರಣ ಎಂದು ಭೂಸನೂರ ಗ್ರಾಮಸ್ಥರು ಸೋಮವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದ ತಹಸೀಮ್​ ಇಸ್ಮಾಯಿಲ್​ ಶೇಖ ಹೆರಿಗೆಗಾಗಿ ಜೂ.4 ಪಿಎಚ್​ಸಿಗೆ ದಾಖಲಾಗಿದ್ದು, ಕರ್ತವ್ಯದಲ್ಲಿದ್ದ ನರ್ಸ್​ ತಪಾಸಣೆ ಮಾಡಿ ಇಂದು ಹೆರಿಗೆ ಆಗಲ್ಲ, ನಾಳೆ ಬನ್ನಿ ಎಂದು ಹೇಳಿ ಕಳಿಸಿದ್ದಾರೆ. ಮರುದಿನ ಬೆಳಗ್ಗೆ 6ರ ಸುಮಾರಿಗೆ ಕೇಂದ್ರಕ್ಕೆ ಹೋದಾಗ ಕೆಲವೇ ಗಂಟೆಗಳಲ್ಲಿ ಸರಳ ಹೆರಿಗೆಯಾಗಲಿದೆ ಎಂದು ಭರವಸೆ ನೀಡಿದರು. ಮೂರ್ನಾಲ್ಕು ಗಂಟೆ ಬಳಿಕ ಗರ್ಭಿಣಿ ಅತಿಯಾದ ನೋವು ಅನುಭವಿಸುತ್ತಿರುವುದರಿಂದ ಪಾಲಕರು ಖಾಸಗಿ ವಾಹನದಲ್ಲಿ ಕೋರಳ್ಳಿ ಪಿಎಚ್​ಸಿಗೆ ಕರೆದೊಯ್ದಿದ್ದು, ನಮ್ಮ ಹತ್ತಿರ ಹೆರಿಗೆ ಆಗುವುದಿಲ್ಲ. ಬೇರೆಡೆ ಕರೆದುಕೊಂಡು ಹೋಗಿ ಎಂದು ಸೂಚಿಸಿದರು.
ಆಳಂದದ ಖಾಸಗಿ ಆಸ್ಪತ್ರೆಗೆ ಹೋದಾಗ ನೀವು ಸಮಯ ವ್ಯರ್ಥ ಹಾಳು ಮಾಡಿದ್ದೀರಿ. ಮಗು ಮತ್ತು ತಾಯಿಗೆ ಪ್ರಾಣಾಪಾಯವಿದೆ ಎಂದು ವೈದ್ಯರು ಹೇಳಿದರು. ಹೆರಿಗೆಯಲ್ಲಿ ಅಸ್ತವ್ಯಸ್ತವಾಗಿ ಶಿಶು ಪ್ರಾಣ ಹೋಗಿದ್ದು, ತಾಯಿ ಅಪಾಯದಿಂದ ಪಾರಾಗಿದ್ದಾಳೆ. ಶಿಶು ಸಾವಿಗೆ ಕಾರಣರಾದ ಭೂಸನೂರ ಪಿಎಚ್​ಸಿ ಎಲ್ಲ ಸಿಬ್ಬಂದಿಯನ್ನು ಅಮಾನತುಗೊಳಿಸಿ ತಾಯಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸಂಬಂಧಿಕರು ಪ್ರತಿಭಟನೆ ನಡೆಸಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಬರೆದ ಪ್ರತವನ್ನು ಟಿಎಚ್​ಒ ಡಾ.ಉಸ್ಮಾನ್​ ಸುತಾರ ಅವರಿಗೆ ಸಲ್ಲಿಸಿದರು.
ಮುತ್ತಣ್ಣ ಬೀಳಗಿ, ಶಾಂತಪ್ಪ ಮೈನಾಳ, ಗುಂಡಪ್ಪ ಪೂಜಾರಿ, ಮಲ್ಲಿನಾಥ ಅರಳಗುಂಡಗಿ, ಕಲ್ಲಪ್ಪ ಕುಲಾಲಿ, ಇಸ್ಮಾಯಿಲ್​ ಶೇಖ, ದಸ್ತಗಿರ ಶೇಖ, ಸೋಮಣ್ಣ ಗೋಡಕೆ, ಮಂಜುನಾಥ ಕಲಶಟ್ಟಿ, ಶ್ರೀಶೈಲ ಸೂರ್ಯವಂಶಿ, ಶೇಖರ ಪ್ಯಾಟಿ, ಸೂರ್ಯವಂಶಿ ಮರಾಠ, ಮಹೇಶ ಹಳ್ಳಿಖೇಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು. ನಿಂರ್ಬಗಾ ಪೊಲೀಸರು ಬೀಗಿ ಭದ್ರತೆ ಕಲ್ಪಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net