ಬಾಬೂಜಿ ಜಯಂತಿ ಅದ್ದೂರಿ ಆಚರಣೆ

 ಚಿತ್ತಾಪುರ ತಹಸಿಲ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬುಜಗಜೀವನ್​ ರಾಮ್​ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮುಖಂಡ ರಾಜಣ್ಣ ಕರದಾಳ ಮಾತನಾಡಿದರು. ನಾಗಯ್ಯ ಹಿರೇಮಠ, ರಾಜಕುಮಾರ ಮರತೂರಕರ, ಚೇತನ್​ ಗುರಿಕರ್​, ಪಂಡಿತ ಶಿಂದೆ ಇತರರಿದ್ದರು.
ಚಿತ್ತಾಪುರ ತಹಸಿಲ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬುಜಗಜೀವನ್​ ರಾಮ್​ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮುಖಂಡ ರಾಜಣ್ಣ ಕರದಾಳ ಮಾತನಾಡಿದರು. ನಾಗಯ್ಯ ಹಿರೇಮಠ, ರಾಜಕುಮಾರ ಮರತೂರಕರ, ಚೇತನ್​ ಗುರಿಕರ್​, ಪಂಡಿತ ಶಿಂದೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ನಾಗಯ್ಯ ಹಿರೇಮಠ ಹೇಳಿಕೆ
  • ಪ್ರಜಾಸೌಧ ಕಚೇರಿಯಲ್ಲಿ ಪೂರ್ವಭಾವಿ ಸಭೆ
ಚಿತ್ತಾಪುರ: ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನ್​ ರಾಮ್​ ಅವರ ಜಯಂತಿಯನ್ನು ಏ.5ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್​ ನಾಗಯ್ಯ ಹಿರೇಮಠ ಹೇಳಿದರು.
ಪ್ರಜಾಸೌಧ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನ್​ ರಾಮ್​ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಏ.5ರಂದು ಬೆಳಗ್ಗೆ ಬಾಬೂಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಅಚ್ಚುಕಟ್ಟಾಗಿ ಮತ್ತು ಶಿಸ್ತುಬದ್ಧ ಸಮಾರಂಭಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ತಾಕೀತು ಮಾಡಿದರು.
ಮುಖಂಡರಾದ ರಾಜಣ್ಣ ಕರದಾಳ, ಮಲ್ಲಿಕಾರ್ಜುನ ಕಾಳಗಿ ಮಾತನಾಡಿದರು.
ಗ್ರೇಡ್​&2 ತಹಸೀಲ್ದಾರ್​ ರಾಜಕುಮಾರ ಮರತೂರಕರ್​, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚೇತನ ಗುರಿಕಾರ್​, ತಾಪಂ ಸಹಾಯಕ ನಿರ್ದೇಶಕ ಪಂಡಿತ ಶಿಂದೆ, ದೈಹಿಕ ಶಿಣಾಧಿಕಾರಿ ಶಿವಶರಣಪ್ಪ ಮಂಠಾಳೆ, ಪ್ರಮುಖರಾದ ಮರೆಪ್ಪ ಸಂದೇನ್​, ನಾಗೇಶ ಹಲಿಗಿ, ಸಾಬಣ್ಣ ಹಲಿಗಿ, ಶ್ರೀಕಾಂತ ಹೊಸಳ್ಳಿಕರ, ಶಿವರಾಜಕುಮಾರ ಬೊಮ್ಮನಳ್ಳಿಕರ, ವಿಶ್ವನಾಥ ಬೊಮ್ಮನಳ್ಳಿಕರ, ಮಹಾಂತೇಶ ಬೊಮ್ಮನಳ್ಳಿಕರ, ರಮೇಶ ಕಟ್ಟಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net