ನಿಗದಿತ ಸಮಯದೊಳಗೆ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ

ನಗುವನಹಳ್ಳಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರದ ಕಟ್ಟಡ ಕಾಮಗಾರಿಗೆ  ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಎನ್.ಪ್ರಕಾಶ್, ಎನ್.ವಿ.ಚಲುವರಾಜು, ಶಿವರಾಜು, ಚಂದ್ರ, ಸಕಲೇಶ್ವರ್, ಪಿಡಿಒ ಶಿಲ್ಪಾ,  ಹರೀಶ್ ಇತರರು ಇದ್ದರು.
ನಗುವನಹಳ್ಳಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರದ ಕಟ್ಟಡ ಕಾಮಗಾರಿಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಎನ್.ಪ್ರಕಾಶ್, ಎನ್.ವಿ.ಚಲುವರಾಜು, ಶಿವರಾಜು, ಚಂದ್ರ, ಸಕಲೇಶ್ವರ್, ಪಿಡಿಒ ಶಿಲ್ಪಾ, ಹರೀಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗುವನಹಳ್ಳಿ ಗ್ರಾಮ
  • ಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಕಾಮಗಾ
ಶ್ರೀರಂಗಪಟ್ಟಣ: ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು.
ಸುಮಾರು 1.66 ಕೋಟಿ ರೂ.ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರವನ್ನು ಗುಣಮಟ್ಟದೊಂದಿಗೆ ನಿಗದಿತ ಸಮಯದಲ್ಲಿ ನಿರ್ಮಿಸಿ ಜನರ ಬಳಕೆಗೆ ನೀಡಲಾಗುವುದು. ಗ್ರಾಮದಲ್ಲಿ ಈ ಮೊದಲು ಇದ್ದ ಗ್ರಾಮ ಪಂಚಾಯಿತಿ ಕಟ್ಟಡ ಅತ್ಯಂತ ಕಿರಿದಾಗಿದ್ದು, ಸಭೆ-ಸಮಾರಂಭ ನಡೆಸಲು ಕಷ್ಟವಾಗುತ್ತಿದ್ದ ಕಾರಣ ಈಗ ಹೊಸದಾಗಿ ನಿರ್ಮಿಸಲಾಗುತ್ತಿದೆ. ಈ ಕಟ್ಟಡವನ್ನು ತಾಲೂಕಿನಲ್ಲೇ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ತೀರ್ಮಾನಿಸಿ 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ನಗುವನಹಳ್ಳಿ ಗ್ರಾಮದಿಂದ ಬೆಳವಾಡಿಗೆ ಹರಿದು ಹೋಗುವ ವಿರಿಜಾ ನಾಲೆಯ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಉದ್ಯೋಗ ಮೇಳ: ಸೆ.11ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ(ಜೂನಿಯರ್)ಕಾಲೇಜು ಆವರಣದಲ್ಲಿ ಎಂಐಟಿ ಕಾಲೇಜು ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ನಾಡಿನ ಹಲವಾರು ಪ್ರತಿಷ್ಠಿತ ಎಂಎನ್‌ಸಿ ಕಂಪನಿಗಳು ಭಾಗವಹಿಸಲಿದ್ದು, ಕ್ಷೇತ್ರದ ಡಿಪ್ಲೊಮಾ, ಐಟಿಐ, ಬಿ.ಕಾಂ, ಬಿ.ಎ ಹಾಗೂ ಬಿ.ಇ. ಪದವೀಧರರು ಭಾಗವಹಿಸಿ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆಯಬಹುದಾಗಿದೆ ಎಂದರು.
ಗ್ರಾಮದ ದೊಡ್ಡಯಜಮಾನ ಪ್ರಕಾಶ್, ಚಿಕ್ಕಯಜಮಾನ ನಾರಾಯಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎನ್.ವಿ.ಚಲುವರಾಜು, ಗ್ರಾಪಂ ಮಾಜಿ ಸದಸ್ಯರಾದ ಶಿವರಾಜು, ಎನ್.ಲತಾ, ಮಾಜಿ ಅಧ್ಯಕ್ಷ ಬೆಳವಾಡಿ ನಂದಕುಮಾರ್, ರಮೇಶ್, ಅರಕೆರೆ ಶಿವಯ್ಯ, ತಾಪಂ ಇಒ ಚಂದ್ರ, ನಗುವನಹಳ್ಳಿ ಗ್ರಾಪಂ ಆಡಳಿತಾಧಿಕಾರಿ ಸಕಲೇಶ್ವರ್, ಪಿಡಿಒ ಶಿಲ್ಪಾ, ಉದ್ಯಮಿ ಹರೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net