

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಇತ್ತೀಚೆಗೆಪ್ರಶಸ್ತಿಗಳನ್ನು ನೀಡುವ ಮತ್ತುಪಡೆಯುವ ಹಿಂದೆ ನಡೆಯುತ್ತಿರುವಲಾಬಿ, ಶಿಾರಸು,ಮಾನದಂಡಗಳನ್ನುಗಮನಿಸಿದರೆ ಬಹಳಷ್ಟು ಅಚ್ಚರಿಎನಿಸುತ್ತಿದೆ.ಆದ್ದರಿಂದ ಯಾವುದೇಪ್ರಶಸ್ತಿಗಳು ಕೊಟ್ಟವರಿಗೆಮತ್ತು ಪಡೆದುಕೊಂಡವರಿಗೆ ಗೌರವತರುವಂತಿರಬೇಕು ಎಂದು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಡಾ.ಶಿವರಾಜವಿ. ಪಾಟೀಲಹೇಳಿದರು.
ಗಾಂಧಿಭವನದಲ್ಲಿ ಕರ್ನಾಟಕ ಕನ್ನಡಬರಹಗಾರರ ಮತ್ತು ಪ್ರಕಾಶಕರ ಸಂಘಆಯೋಜಿಸಿದ್ದ ಪ್ರಶಸ್ತಿ ಪ್ರದಾನಸಮಾರಂಭದಲ್ಲಿ ಗಣ್ಯರಿಗೆ ಪ್ರಶಸ್ತಿನೀಡಿ ಮಾತನಾಡಿದರು.
ಬರಹಗಾರರಮತ್ತು ಪ್ರಕಾಶಕರ ಸಂಘ ಪಾರದರ್ಶಕವಾಗಿಅರ್ಹರನ್ನು ಪ್ರಶಸ್ತಿಗೆ ಆಯ್ಕೆಮಾಡಿರುವುದು ಸ್ತುತ್ಯಾರ್ಹಕಾರ್ಯ. ಪುರಸ್ಕೃತರಿಂದಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ.ಮಹಾಕವಿ ಕಾಳಿದಾಸಹೇಳುವಂತೆ ರತ್ನಗಳು ಯಾರನ್ನೂಹುಡುಕಿಕೊಂಡು ಬರುವುದಿಲ್ಲ.ಮನುಷ್ಯನೇರತ್ನಗಳನ್ನು ಹುಡುಕಿಕೊಂಡುಹೋಗುತ್ತಾನೆ.ಹಾಗೇ ನಿಜವಾದಸಾಧಕರನ್ನು ಪ್ರಶಸ್ತಿಗಳೇಹುಡುಕಿಕೊಂಡು ಬರಬೇಕು.ಪ್ರಶಸ್ತಿಗಾಗಿಪರಿಶ್ರಮ ಪಡುವವರು ಬಹಳಷ್ಟಿದ್ದಾರೆ.ಆದರೆ ವಾಸ್ತವದಲ್ಲಿಯಾರು ಪರಿಶ್ರಮಪಟ್ಟು ಸಾಧನೆಮಾಡುತ್ತಾರೆಯೋ ಅವರಿಗೆ ಪ್ರಶಸ್ತಿಗಳುಸಿಗಬೇಕು. ಅಂತಹಸಾಧಕರು ನಮ್ಮ ನಡುವೆ ಸಾಕಷ್ಟಿದ್ದಾರೆ.ಅವರನ್ನು ಹುಡುಕಿಗೌರವಿಸುವುದು ಸಮಾಜದ ಕರ್ತವ್ಯ.ಹಾಗೆ ಗುರುತಿಸುವುದರಿಂದಇತರರಿಗೂ ಸಮಾಜದಲ್ಲಿ ಸಾಧನೆಮಾಡಬೇಕೆಂಬ ಪ್ರೇರಣೆ ದೊರೆಯುತ್ತದೆ. ಒಂದು ಪುಸ್ತಕಹೊರಬರಬೇಕಾದರೆ ಬರಹಗಾರ,ಪ್ರಕಾಶಕ ಮತ್ತುಮುದ್ರಕ ಮೂವರ ಶ್ರಮವಿದೆ.ಆ ಮೂವರನ್ನುಒಳಗೊಂಡಿರುವ ಪ್ರಸ್ತುತ ಸಂಘಕೈಗೊಂಡಿರುವ ಜ್ಞಾನಪ್ರಸಾರಕಾರ್ಯಕ್ಕೆ ಸಮಾಜ ಮತ್ತು ಸರ್ಕಾರಸೂಕ್ತ ಸಹಕಾರ ನೀಡುವ ಅಗತ್ಯವಿದೆಎಂದು ಶಿವರಾಜ ಪಾಟೀಲರು ಹೇಳಿದರು.
ಕಾರ್ಯಕ್ರಮದಲ್ಲಿಹಿರಯ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿಯವರಮೀಮಾಂಸೆ ಕೃತಿಗಾಗಿ ಸಾಹಿತ್ಯರತ್ನ, ಯುವಸಾಹಿತಿ ಅನಂತ ಕುಣಿಗಲ್ ಅವರಆಕ್ರಮಣ ಕೃತಿಗಾಗಿ ಯುವ ಸಾಹಿತ್ಯರತ್ನ, ಐಬಿಎಚ್ಪ್ರಕಾಶನ ಸಂಸ್ಥೆಯ ಎಚ್.ಕೆ.ಲಕ್ಷ್ಮೀನಾರಾಯಣಅವರಿಗೆ ಪುಸ್ತಕ ರತ್ನ,ಕನ್ನಡ ಗಣಕಪಿತಾಮಹ ಡಾ.ಕೆ.ಪಿ.ರಾವ್ಮತ್ತು ಶ್ರೀವೆಂಕಟೇಶ್ವರ ಪ್ರಿಂಟಿಂಗ್ಪ್ರೆಸ್‌ನ ಸಿ.ಆರ್.ಜನಾರ್ದನಅವರಿಗೆ ಮುದ್ರಣ ರತ್ನ,ಪ್ರಶಸ್ತಿ ನೀಡಿಗೌರವಿಸಲಾಯಿತು.
ಸಮಾರಂಭದಲ್ಲಿಸಂಘದ ಅಧ್ಯಕ್ಷ ನಿಡಸಾಲೆಪುಟ್ಟಸ್ವಾಮಯ್ಯ,ಕಾರ್ಯದರ್ಶಿಆರ್.ದೊಡ್ಡೆಗೌಡ, ಸಂಸ್ಕೃತ ವಿದ್ವಾಂಸಪ್ರೊ.ಮಲ್ಲೇಪುರಂಜಿ.ವೆಂಕಟೇಶ,ನಾಡೋಜ ಡಾ.ವೂಡೇಪಿ.ಕೃಷ್ಣಮತ್ತಿತರರು ಪಾಲ್ಗೊಂಡಿದ್ದರು.