ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ವಿಧಾನಗಳು, ತುರ್ತು ಚಿಕಿತ್ಸಾ ಟಕದ ಸಿದ್ಧತೆ, ರಕ್ತದ ಒತ್ತಡ, ಉಸಿರಾಟ ಹಾಗೂ ಇತರೆ ತುರ್ತು ಆರೋಗ್ಯ ಸೇವೆಗಳ ನಿರ್ವಹಣೆ ಕುರಿತ ಮಾಹಿತಿ ಹಂಚಿಕೊಂಡರು. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಯೊಳಗಿನ ಪ್ರತಿಯೊಂದು ವಿಭಾಗದ ಪಾತ್ರ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿವರಿಸಲಾಯಿತು. ಜಿಲ್ಲಾ ಗೃಹರಕ ದಳದ ಸಿಬ್ಬಂದಿ ಜನಸಂದಣಿ ನಿಯಂತ್ರಣ, ಸುರಕ್ಷಿತ ನಿರ್ಗಮನ ವ್ಯವಸ್ಥೆ, ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡುವ ವಿಧಾನಗಳ ಕುರಿತು ಪ್ರಾತ್ಯಕೆ ನಡೆಸಿದರು. ವಿವಿಧ ಇಲಾಖೆಗಳ ನಡುವೆ ತ್ವರಿತ ಮಾಹಿತಿ ವಿನಿಮಯ ಮತ್ತು ಸಮನ್ವಯದ ಅಗತ್ಯತೆಯನ್ನು ಈ ಅಣಕು ಪ್ರದರ್ಶನದ ಮೂಲಕ ಪರಿಣಾಮಕಾರಿಯಾಗಿ ತೋರಿಸಲಾಯಿತು.