ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

ಆಲಮೇಲ ಪಟ್ಟಣದ ಸಿದ್ಧೇಶ್ವರ ಸೂಪರ್ ಬಜಾರದ ಮುಂದೆ ಆರೋಪಿಯನ್ನು ಗಡಿಪಾರು ಮಾಡಬೇಕು ಹಾಗೂ ಸಿದ್ಧೇಶ್ವರ ಸೂಪರ್ ಬಜಾರ ಬಂದ್ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂರು  ಪ್ರತಿಭಟನೆ ನಡೆಸುತ್ತಿರುವುದು.
ಆಲಮೇಲ ಪಟ್ಟಣದ ಸಿದ್ಧೇಶ್ವರ ಸೂಪರ್ ಬಜಾರದ ಮುಂದೆ ಆರೋಪಿಯನ್ನು ಗಡಿಪಾರು ಮಾಡಬೇಕು ಹಾಗೂ ಸಿದ್ಧೇಶ್ವರ ಸೂಪರ್ ಬಜಾರ ಬಂದ್ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂರು ಪ್ರತಿಭಟನೆ ನಡೆಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಆಲಮೇಲದಲ್ಲಿ ಮುಸ್ಲಿಂರಿಂದ ಪ್ರತಿಭಟನೆ
  • ಕೆಲಕಾಲ ಉದ್ವಿಗ್ನ
  • ಆರೋಪಿ ಪೊಲೀಸ್ ವಶಕ್ಕೆ
ಆಲಮೇಲ: ಶಾಲೆಗೆ ಹೋಗುತ್ತಿರುವ ಅಪ್ರಾಪ್ತ ಬಾಲಕಿ ಮುಂದೆ ಅಶ್ಲೀಲವಾಗಿ ವರ್ತಿಸಿ, ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಪಟ್ಟಣದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ಸಿದ್ಧೇಶ್ವರ ಸೂಪರ್ ಬಜಾರದ ವಾಚ್‌ಮನ್ ರಾಚಯ್ಯ ಹಿರೇಮಠ ಎಂಬ ವ್ಯಕ್ತಿ ಬುಧವಾರ ಬೆಳಗ್ಗೆ ಅಪ್ರಾಪ್ತೆ ಬೆಳಗ್ಗೆ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ತನ್ನ ಪ್ಯಾಂಟಿನ ಜಿಪ್ ತೆರೆದು ಖಾಸಗಿ ಅಂಗ ತೋರಿಸಿ ಅಶ್ಲೀಲವಾಗಿ ವರ್ತಿಸಿ, ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಆತನ ವರ್ತನೆಯಿಂದ ಬಾಲಕಿ ಕಿರುಚಿಕೊಂಡಿದ್ದಾಳೆ. ಅಕ್ಕ-ಪಕ್ಕದವರು ಬಾಲಕಿಯ ಕಿರಚಾಟ ಕಂಡು ಆರೋಪಿ ರಾಚಯ್ಯನನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮುಸ್ಲಿಂ ಯುವಕರಿಂದ ಪ್ರತಿಭಟನೆ: ಪಟ್ಟಣದಲ್ಲಿ ಸುದ್ದಿ ಹರಡುತ್ತಿದ್ದಂತೆ ನೂರಾರು ಮುಸ್ಲಿಂ ಯುವಕರು ಇಂಡಿ ರಸ್ತೆಯಲ್ಲಿರುವ ಸಿದ್ಧೇಶ್ವರ ಸೂಪರ್ ಬಜಾರದ ಮುಂದೆ ಜಮಾಯಿಸಿ, ಆರೋಪಿಯನ್ನು ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು ಹಾಗೂ ಪಟ್ಟಣದ ಸಿದ್ಧೇಶ್ವರ ಸೂಪರ್ ಬಜಾರ ಬಂದ್ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಇದರಿಂದ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿಂದಗಿ ಸಿಪಿಐ ಸುನೀಲ ಮೂಲಿಮನಿ, ಪಿಎಸ್‌ಐ ಶ್ರೀಕಾಂತ ಕಾಂಬಳೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು, ನಂತರ ಪ್ರತಿಭಟನಾಕಾರರನ್ನು ಠಾಣೆಗೆ ಕರೆಸಿ ಅಪ್ರಾಪ್ತೆ ತಾಯಿ ಕಡೆಯಿಂದ ದೂರು ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಪಟ್ಟಣದಲ್ಲಿ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ. ಪ.ಪಂ. ಅಧ್ಯಕ್ಷ ಸಾಧಿಕ್ ಸುಂಬಡ, ಮುಖಂಡರಾದ ಸೈಪನ ಮುಲ್ಲಾ, ಸೈಪನ ಜಮಾದಾರ, ಅಲಿ ನಾಲಬಂದ, ಶಾಖಾ ಬೇಪಾರಿ, ಬಂದೇನವಾಜ ಸೌದಾಗರ, ಗಾಲೀಬ ತಾಂಭೋಳಿ, ಪೈಗಂಬರ್ ಬಳೂರಗಿ, ರಿಜ್ವಾನ ಬಿಳವಾರ, ಬಬಲು ಪಠಾಣ, ಅಬ್ದುಲ ಕಸಾಬ, ಹುಸೇನ ದಿಕ್ಕಸಂಗಿ, ಯುನುಸ ಅಗಾನ, ರಾಜು ಮೇಲಿನಮನಿ, ಅಲಿ ಮೇಲಿನಮನಿ ಇತರರಿದ್ದರು.
"

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಪ್ರಕರಣದ ತನಿಖೆ ನಡೆಯುತ್ತಿದೆ. ಈ ತರಹ ಮನಸ್ಥಿತಿ ಹೊಂದಿರುವ ವ್ಯಕ್ತಿ ಯಾರೇ ಇರಲಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು.

ಸುನೀಲ ಮೂಲಿಮನಿ ಸಿಪಿಐ, ಸಿಂದಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net