ಎಟಿಎಂ ಕಳ್ಳತನಕ್ಕೆ ಯತ್ನ, ಸೈರನ್ ಅಲರ್ಟ್‌ನಿಂದ ತಪ್ಪಿದ ಕೃತ್ಯ

ಹೊಸಪೇಟೆಯಲ್ಲಿ ನಾಲ್ಕು ಜನರ ತಂಡ ಕಳ್ಳತನಕ್ಕೆ ಯತ್ನಿಸಿರುವ ಎಟಿಎಂ.
ಹೊಸಪೇಟೆಯಲ್ಲಿ ನಾಲ್ಕು ಜನರ ತಂಡ ಕಳ್ಳತನಕ್ಕೆ ಯತ್ನಿಸಿರುವ ಎಟಿಎಂ.
Published on

ಪ್ರಮುಖ ಮುಖ್ಯಾಂಶಗಳು

  • ಹೊಸಪೇಟೆ ನಗರದ ಕನಕದಾಸ ವೃತ್ತದ ಬಳಿ ಘಟನೆ
  • ವಿಜಯನಗರ ಪೊಲೀಸ್ ಕಂಟ್ರೋಲ್ ರೂಮ್‌ಗೆ ತಕ್ಷಣವೇ ಮಾಹಿತಿ ರವಾನೆ
ಹೊಸಪೇಟೆ: ನಗರದ ಕನಕದಾಸ ವೃತ್ತದ ಬಳಿ ಎಸ್‌ಬಿಐ ಎಟಿಎಂನಲ್ಲಿ ನಾಲ್ಕು ಜನರ ತಂಡ ಮಂಗಳವಾರ ತಡರಾತ್ರಿ ಕಳ್ಳತನಕ್ಕೆ ಯತ್ನಿಸಿದೆ. ಸೈರನ್ ಶಬ್ದದಿಂದಾಗಿ ಕಳ್ಳತನ ಕೃತ್ಯ ವಿಫಲವಾಗಿದೆ. ಮುಖದ ಗುರುತು ಸಿಗಬಾರದು ಎಂದು ಕಳ್ಳರು ಎಟಿಎಂ ಒಳಗಿರುವ ಸಿಸಿ ಕ್ಯಾಮರಾಗಳಿಗೆ ಬಣ್ಣದ ಸ್ಪ್ರೆ ಸಿಂಪಡಿಸಿದ್ದಾರೆ.
ಆಗ ಎಟಿಎಂನಲ್ಲಿದ್ದ ಸೈರನ್ ಶಬ್ದವಾಗಿದೆ. ಇದರಿಂದ ವಿಜಯನಗರ ಪೊಲೀಸ್ ಕಂಟ್ರೋಲ್ ರೂಮ್‌ಗೆ ತಕ್ಷಣವೇ ಮಾಹಿತಿ ರವಾನೆಯಾಗಿದೆ. ಕಂಟ್ರೋಲ್ ರೂಂ ಸಿಬ್ಬಂದಿ ಕೂಡಲೇ ನೈಟ್ ಬೀಟ್‌ನಲ್ಲಿದ್ದ ಪೊಲೀಸರಿಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಪೊಲೀಸರು ಎಟಿಎಂ ತಲುಪುವಷ್ಟರಲ್ಲಿ ಕಳ್ಳರ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ. ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net