"
ತಮಟೆ ಬಾರಿಸುತ್ತ ಪ್ರತಿಭಟನೆ
ಬಿಟಿಡಿಎನಲ್ಲಿ ಸಂತ್ರಸ್ತರ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಡಿಎಸ್‌ಎಸ್ ವತಿಯಿಂದ ಮಹಿಳೆಯರು ಸೇರಿ ನೂರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮಟೆ ಬಾರಿಸುತ್ತ, ಕೂಗುತ್ತ ಆಗಮಿಸಿದ ಪ್ರತಿಭಟನಾಕಾರರು, ಬ್ಯಾರಿಕೇಡ್ ದಾಟಿಕೊಂಡು ಹೋಗಲು ಮುಂದಾದರು. ಈ ವೇಳೆ ಅವರನ್ನು ತಡೆದ ಪೊಲೀಸರ ಜೊತೆಗೆ ಮಾತಿನ ಚಕುಮಕಿಯೂ ನಡೆಯಿತು.
ರೈತ ಬಸಪ್ಪ ಅವರು ಹಲ್ಲೆಗೆ ಮುಂದಾಗಲು ಹಿಂದಿನ ಕಾರಣವೇನು? ಆತನಿಗೆ ಕಚೇರಿಯಲ್ಲಿ ಯಾವ ಕೆಲಸ ಆಗಬೇಕಿದ್ದು, ಎಷ್ಟು ದಿನಗಳಿಂದ ಅಲೆದಾಡುತ್ತಿದ್ದಾರೆ. ವಾಸ್ತವ ಸಮಸ್ಯೆ ಏನು? ನೌಕರನ ಮೇಲೆ ಹಲ್ಲೆ ನಡೆಸುವ ಮನಸ್ಥಿತಿಗೆ ಬರಲು ಆತನ ತಾಳ್ಮೆ ಮೀರಲು ಅಧಿಕಾರಿಗಳು ಯಾವ ರೀತಿ ನಡೆದುಕೊಂಡಿದ್ದಾರೆ.
ಹೀಗೆ ಇಡೀ ಘಟನೆ ಬಗ್ಗೆ ಎಲ್ಲ ಆಯಾಮಗಳಿಂದಲೂ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು, ಬಿಟಿಡಿಎ ಅಧಿಕಾರಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಬಗ್ಗೆ ಕಲೆ ಹಾಕಿಕೊಂಡಿದ್ದು, ರೈತ ಬಸಪ್ಪ ದೊಡ್ಡಮನಿ ಪರವಾಗಿ ಸುಮೋಟೊ ಕೇಸ್ ದಾಖಲಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಜ್ಯ ಸಂಘಟನಾ ಸಂಚಾಲಕ ಪರಶುರಾಮ ನೀಲನಾಯಕ, ಪಡಿಯಪ್ಪ ಕಳ್ಳಿಮನಿ, ಶ್ಯಾಮ ಕಾಳೆ, ಸಿದ್ದು ಮಾದರ, ತುಳಜಾರಾಮ ನೀಲನಾಯಕ, ಅಂಜು ಬಾನು, ಗಾಯತ್ರಿ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.