ಮಹಿಳಾ ಬಿಲ್​ ಹೆಸರಲ್ಲಿ ಮಾರಕ ಕಾನೂನುಗೆ ಯತ್ನ

,
,
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳ್ಹಾರ ಆರೋಪ
  • ಸಿಎಂ ಜತೆ ಚರ್ಚಿಸದೇ ನಿರ್ಧಾರ
ಯಾದಗಿರಿ: ಮಹಿಳಾ ಬಿಲ್​ ಹೆಸರಲ್ಲಿ ಕ್ಷೇತ್ರ ಮರು ವಿಂಗಡಣೆಯಂತಹ ಮಾರಕ ಕಾನೂನುಗಳನ್ನಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳ್ಹಾರ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್​ ಆಗಿದೆ. ನಮ್ಮ ಪಕ್ಷದಿಂದ ಮಹಿಳೆಯರನ್ನು ರಾಷ್ಟ್ರಪತಿ, ಪ್ರಧಾನಿ ಹಾಗೂ ಲೋಕಸಭೆಯ ಸ್ಪೀಕರ್​ ಮಾಡಲಾಗಿದೆ. ಸ್ಥಳಿಯ ಚುನಾವಣೆಯಲ್ಲೂ ಮೀಸಲಾತಿ ತಂದಿದ್ದು ನಮ್ಮ ಕಾಂಗ್ರೆಸ್​ ಪಕ್ಷ ಎಂಬುದನ್ನು ಬಿಜೆಪಿಯವರು ಮರೆಯಬಾರದು ಎಂದರು.
ಬಿಜೆಪಿ ಸರ್ಕಾರ ಆಡಳಿತಾವಧಿಯಲ್ಲಿ ಮಣಿಪುರದ ಜನಾಂಗೀಯ ಹಿಂಸಾಚಾರದಿಂದ ಸುಮಾರು 60 ಸಾವಿರಕ್ಕೂ ಅಧಿಕ ಜನ ಸ್ಥಳಾಂತರಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳಾ ಮತ್ತು ಮಕ್ಕಳಿದ್ದರು. 2023ರಲ್ಲಿ ಇಂಪಾಲ್​ ಪಶ್ಚಿಮದಲ್ಲಿ ಇಬ್ಬರು ಮೈತಿ ಕ್ರಿಶ್ಚಿಯನ್​ ಮಹಿಳೆಯರು ಮತ್ತು ಒಂದು ಮಗುವನ್ನು ಅಂಬುಲೆನ್ಸ್​ನಲ್ಲಿ ಜೀವಂತವಾಗಿ ಸುಟ್ಟು ಹಾಕಲಾಗಿದೆ. ನಂತರದಲ್ಲಿ ನಡೆದ ಸಂಘರ್ಷದಲ್ಲಿ ಸಾವನ್ನಪ್ಪಿದವರಲ್ಲಿ ಕನಿಷ್ಠ 21 ಮಹಿಳೆಯರಿದ್ದರು ಎಂದು ವರದಿಯಾಗಿದೆ ಎಂದು ಹೇಳಿದರು.
ಹಣದುಬ್ಬರಕ್ಕೆ ಪೂರಕವಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇಷ್ಟೆಲ್ಲ ಅನಾಹುತಗಳಿಗೆ ಕಾರಣವಾದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಮಹಿಳೆಯರ ಕಾಯ್ದೆಗೆ ಕಾಂಗ್ರೆಸ್​ ವಿರೋಧ ಮಾಡಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಅವರು ದೂರಿದರು.
ಮೇಲ್ನೋಟಕ್ಕೆ ಮಹಿಳಾ ಮೀಸಲು ಬಿಲ್​ ಇಟ್ಟುಕೊಂಡು 2011ರ ಜನಗಣತಿ ಆಧರಿಸಿ ಭಾರತಾದ್ಯಂತ ಹಿಂಬಾಗಿಲಿನ ಮೂಲಕ ಕ್ಷೇತ್ರ ಮರು ವಿಂಗಡಣೆ ಮಾಡುವ ಪ್ರಯತ್ನ ಮಾಡಲಾಗಿದೆ. ದಕ್ಷಿಣ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳ ಕ್ಷೇತ್ರ ಮರು ವಿಂಗಡಣೆ ತಮ್ಮ ಪ್ರಾತಿನಿಧ್ಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಆತಂಕ ವ್ಯಕ್ತಪಡಿಸಿದವು. ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳದೆ ಪ್ರಧಾನಿ ಮೋದಿ ಅವರು ಏಕಪಯ ನಿರ್ಧಾರ ಮಾಡಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ರಾವೇಂದ್ರ ಮಾನಸಗಲ್​, ಮಲ್ಲಿಕಾರ್ಜುನ ಈಟೆ, ಬಾಪುಗೌಡ ಮಾಚನೂರ, ಬಸವರಾಜಪ್ಪ ಬಾಚವಾರ, ಶಿವರಾಜ ಬಾವೂರ, ನಾಗನಗೌಡ ಹಳಿಗೇರ, ಮರೀಲಿಂಗಪ್ಪ ಬಂದಳ್ಳಿ ಇತರರಿದ್ದರು.
ಇತಿಹಾಸ ತೆಗೆದು ನೋಡಲಿ
ಮಹಿಳಾ ಮೀಸಲಾತಿ ಬಗ್ಗೆ ನಮ್ಮ ಪ ವಿರೋಧ ಮಾಡಿದೆ ಎಂದು ಬಿಜೆಪಿ ಮತ್ತು ಜೆಡಿಎಸ್​ನವರು ಪ್ರತಿಭಟನೆ ಮಾಡಿ ಸುಳ್ಳು ಹೇಳುತ್ತಿದ್ದಾರೆ. ಆದರೆ ಅವರು ತಂದ ಕಾಯಿದೆಯಲ್ಲಿನ ಅಂಶಗಳ ಬಗ್ಗೆ ದೇಶದ ಜನರಿಗೆ ಸಮಗ್ರ ಮಾಹಿತಿ ನೀಡದೆ ಕಣ್ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರ ಬಗ್ಗೆ ಕಾಂಗ್ರೆಸ್​ ಪಕ್ಕೆ ಹೆಚ್ಚಿನ ಗೌರವವಿದೆ ಎಂಬುದನ್ನು ಹಿಂದಿನ ಇತಿಹಾಸ ತೆಗೆದು ನೋಡಲಿ ಎಂದು ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಬಸರೆಡ್ಡಿ ಅನಪುರ ತಿವಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net