ಕೊಲೆ ಯತ್ನ ನಂತರ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಜಾಮೀನಿನ ಮೇಲೆ ಹೊರಬಂದು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಬಗ್ಗೆ ಇತ್ತೀಚೆಗೆ ತನಿಖೆ ಕೈಗೆತ್ತಿಕೊಂಡ ಮುಳಬಾಗಿಲು ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕಿ ಮನೀಷಾ ಅವರು ಗೌನಿಪಲ್ಲಿ ವೃತ್ತ ನಿರೀಕ್ಷಕ ಶಿವಕುಮಾರ್, ರಾಯಲ್ಪಾಡು ಠಾಣೆ ಪಿಎಸ್ಐ ರಾಮು, ಸಿಬ್ಬಂದಿ ಸಂಪತ್, ಗಂಗರಾಜ್ ತಂಡದೊಂದಿಗೆ ಆಂಧ್ರಕ್ಕೆ ತೆರಳಿ ಆರೋಪಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.