ಗೋವನಕೊಪ್ಪ ಗ್ರಾಮದಲ್ಲಿ ರಾಷ್ಟ್ರೀಯ ಪಂಜಾ ಕುಸ್ತಿ ಸ್ಪರ್ಧೆಯಲ್ಲಿ ಸಾಧನೆಗೈದ ಯಲ್ಲವ್ವ ಉಪ್ಪಾರ ಹಾಗೂ ನೀಲವ್ವ ಬಗವಾಡಿ ಅವರನ್ನು ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷೆ ಅಶ್ವಿನಿ ಬೆಳವಡಿ ಸನ್ಮಾನಿಸಿದರು. ಬಿ.ಎನ್.ಹೊಸೂರ, ಭೀಮಪ್ಪ ತಳವಾರ, ಬಸವರಾಜ ಉದಂಡಿ ಇತರರಿದ್ದರು.
ಗ್ರಾಮೀಣ ಪ್ರದೇಶದ ಕ್ರಿಯಾಶೀಲ ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ಹಾಗೂ ಸೌಲಭ್ಯ ದೊರೆತಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷೆ ಅಶ್ವಿನಿ ಬೆಳವಡಿ ಹೇಳಿದರು.
ರಾಷ್ಟ್ರೀಯ ಪಂಜಾ ಕುಸ್ತಿ ಸ್ಪರ್ಧೆಯಲ್ಲಿ ಸಾಧನೆಗೈದ ಗೋವನಕೊಪ್ಪ ಗ್ರಾಮದ ಯಲ್ಲವ್ವ ಉಪ್ಪಾರ ಹಾಗೂ ಶಿರಸಂಗಿ ಗ್ರಾಮದ ನೀಲವ್ವ ಬಗವಾಡಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಗುಜರಾತ್ ರಾಜ್ಯದ ಗಾಂಧಿನಗರದಲ್ಲಿ ಈಚೆಗೆ ನಡೆದ 4ನೇ ಪಿಎಎ್ಐ ರಾಷ್ಟ್ರೀಯ ಪಂಜಾ ಕುಸ್ತಿ ಹಾಗೂ ಪ್ಯಾರಾ ಪಂಜಾ ಕುಸ್ತಿ ಚಾಂಪಿಯನ್‌ಶಿಪ್-2026ರಲ್ಲಿ ಯಲ್ಲವ್ವ ಉಪ್ಪಾರ ಎರಡು ಚಿನ್ನದ ಪದಕ ಹಾಗೂ ನೀಲವ್ವ ಬಗವಾಡಿ ಒಂದು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಇವರ ಸಾಧನೆ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ಕ್ರೀಡಾಪಟುಗಳ ಭವಿಷಕ್ಕೆ ಅಗತ್ಯ ಸಹಕಾರ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.