ಸೂಕ್ತ ಮಾಹಿತಿ ನೀಡಿ ಗಣತಿಗೆ ಸಹಕರಿಸಿ census

ಸೂಕ್ತ ಮಾಹಿತಿ ನೀಡಿ ಗಣತಿಗೆ ಸಹಕರಿಸಿ census
ಸೂಕ್ತ ಮಾಹಿತಿ ನೀಡಿ ಗಣತಿಗೆ ಸಹಕರಿಸಿ census
Published on
ಪಾತಪಾಳ್ಯ: ದೇಶಾದಾದ್ಯಂತ ಆರಂಭವಾಗಿರುವ ಸ್ವಯಂ ಗಣತಿಯಲ್ಲಿ ಕುಟುಂಬ ಸಮೇತವಾಗಿ ಎಲ್ಲರೂ ಪಾಲ್ಗೊಂಡು ಸೂಕ್ತ ಮಾಹಿತಿ ನೀಡಬೇಕೆಂದು ಗಣತಿದಾರ ಜಿ.ಎ.ವೆಂಕಟೇಶ್​ ತಿಳಿಸಿದರು. 
ಪಾತಪಾಳ್ಯ ಹೋಬಳಿಯಲ್ಲಿ ಶುಕ್ರವಾರ ಭಾರತ ಜನಗಣತಿ 2026-&27ರ ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದರು.census 
ದೇಶದಲ್ಲಿರುವ ಜನಸಂಖ್ಯೆಯ ಪ್ರಮಾಣ, ಅವರ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಜೀವನ ಮಟ್ಟವನ್ನು ಒಂದು ದತ್ತಾಂಶದ ರೀತಿಯಲ್ಲಿ ಸಮಗ್ರವಾಗಿ ಸಂಗ್ರಹಿಸುವ, ಅದಕ್ಕೆ ಅನುಗುಣವಾಗಿ ದೇಶದ ಆರ್ಥಿಕ ಯೋಜನೆಗಳನ್ನು ರೂಪಿಸಲು ಜನಗಣತಿ ಮಹತ್ತರ ಕಾರ್ಯವಾಗಿದೆ. ಜನಗಣತಿಯಿಂದ ಲಭ್ಯವಾಗುವ ಅಂಕಿ&ಅಂಶಗಳು ಸಂಖ್ಯೆಗಳಲ್ಲ. ದೇಶದ ಅಭಿವೃದ್ಧಿಗೆ ದಿಕ್ಸೂಚಿ. ಈ ವರ್ಷ ಸಂಪೂರ್ಣ ಡಿಜಿಟಲ್​ ಜನಗಣತಿ ನಡೆಯುತ್ತಿದೆ. ಹಾಗಾಗಿ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಕುಟುಂಬದ ನಿಖರ ಮಾಹಿತಿ ನೀಡಬೇಕೆಂದರು. 
ಗಣತಿದಾರ ಶಹನಾಜ್​ ಮಾತನಾಡಿ, ಗಣತಿದಾರರು ಮನೆಗೆ ಬಂದಾಗ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ನಿಖರ ಮಾಹಿತಿ ನೀಡಿ ಸಹಕರಿಸುವ ಮೂಲಕ ಸರ್ಕಾರದ ಸೌಲಭ್ಯಗಳು ಅರ್ಹರಿಗೆ ತಲುಪಲು ಸಾಧ್ಯವಾಗುತ್ತದೆ ಎಂದರು. 
ಗಣತಿದಾರರಾದ ಶಾವರ್​ ಸುಲ್ತಾನ, ಷಫಿವುಲ್ಲಾ, ಸಾದಿಕ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net