ಆಸ್ಪತ್ರೆಗಳಿಗೆ ವೈದ್ಯರನ್ನು ನಿಯೋಜನೆ ಮಾಡಿ

ಸುಲೇಪೇಟದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ವೈದ್ಯಕಿಯ ಶಿಣ ಸಚಿವ ಡಾ. ಶರಣಪ್ರಕಾಶ ಪಾಟೀಲ್​ ಮಾತನಾಡಿದರು. ಸಮದ್​ ಪಟೇಲ್​, ಪ್ರಭುರೆಡ್ಡಿ, ಸುಬ್ಬಣ್ಣ ಜಮಖಂಡಿ, ಸಂಗಮನಾಥ ಹಿರೇಮಠ, ಸಂತೋಷಕುಮಾರ ಚವ್ಹಾಣ ಇದ್ದರು.
ಸುಲೇಪೇಟದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ವೈದ್ಯಕಿಯ ಶಿಣ ಸಚಿವ ಡಾ. ಶರಣಪ್ರಕಾಶ ಪಾಟೀಲ್​ ಮಾತನಾಡಿದರು. ಸಮದ್​ ಪಟೇಲ್​, ಪ್ರಭುರೆಡ್ಡಿ, ಸುಬ್ಬಣ್ಣ ಜಮಖಂಡಿ, ಸಂಗಮನಾಥ ಹಿರೇಮಠ, ಸಂತೋಷಕುಮಾರ ಚವ್ಹಾಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಸೂಚನೆ
  • ಸುಲೇಪೇಟದಲ್ಲಿ ಪ್ರಗತಿ ಪರಿಶೀಲನೆ ಸಭೆ
ಚಿಂಚೋಳಿ : ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೂಡಲೇ ವೈದ್ಯರನ್ನು ನಿಯೋಜನೆ ಮಾಡಬೇಕು. ಅಲ್ಲದೆ ಸೇಡಂ, ಚಿಂಚೋಳಿ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಔಷಧಿ, ಚುಚ್ಚುಮದ್ದುಗಳನ್ನು ತ್ವರಿತವಾಗಿ ಪೂರೈಸಬೇಕು ಎಂದು ವೈದ್ಯಕಿಯ ಶಿಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಸೂಚನೆ ನೀಡಿದರು.
ಸುಲೇಪೇಟದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ತಿಂಗಳಲ್ಲಿ ಜಲಜೀವನ ಮಿಷನ್​ ಬ್ಯಾಚ್​ 1 ರಿಂದ 3ವರೆಗೆ ಆಯ್ಕೆಗೊಂಡ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಶ್ರೀವೇ ಜಲಜೀವನ ಮಿಷನ್​, ಗ್ರಾಪಂ ಅಭಿವೃದ್ಧಿ, ಇಒ ಜಂಟಿಯಾಗಿ ಸಭೆ ಮಾಡಿ, ಸ್ಥಳ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಬೇಕು. ಸಮರ್ಪಕವಾಗಿ ಕೆಲಸ ಮಾಡದ ಜೆಸ್ಕಾಂ ಕಾಳಗಿ, ಭೂ ಸೇನಾ ನಿಗಮ ಅಧಿಕಾರಿ, ಜಲಜೀವನ ಮಿಷನ್​ ಅಧಿಕಾರಿಗಳಿಗೆ ನೋಟಿಸ್​ ಜಾರಿ ಮಾಡುವಂತೆ ಎಂದು ತಾಕೀತು ಮಾಡಿದರು.
ಕೃಷಿ ಮಳಿಗೆಗಳಲ್ಲಿ ಬೀಜ, ರಸಗೊಬ್ಬರ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಕುರಿತು ದೂರುಗಳಿವೆ. ಕಡ್ಡಾಯವಾಗಿ ಸರ್ಕಾರದ ದರ ಫಲಕ ಹಾಗೂ ರಸಗೊಬ್ಬರ ಲಭ್ಯವಿರುವ ದಾಸ್ತಾನು ಪಟ್ಟಿ ಇತ್ಯಾದಿ ಅಳವಡಿಸಬೇಕು. ಯಾವುದೇ ದೂರುಗಳು ಬರದಂತೆ ಎಚ್ಚರವಹಿಸಬೇಕು. ಗಡಿಕೇಶ್ವಾರ, ನಿಡಗುಂದಾ, ಗಣಾಪುರ ಗ್ರಾಮಗಳು ಇದೀಗ ಕೆಪಿಎಸ್​ ಶಾಲೆಗಳಾಗಿ ಕಾರ್ಯನಿರ್ವಹಿಸಲಿದ್ದು, 39 ಪ್ರಾಥಮಿಕ, 9 ಪ್ರೌಢ, 2 ಪಿಯುಸಿ ಕಾಲೇಜುಗಳಿವೆ. ಶಿಕರ ಕೊರತೆಯಾಗದಂತೆ ಕಾರ್ಯನಿರ್ವಹಿಸಬೇಕು. ಪಠ್ಯಪುಸ್ತಕ, ಸಮವಸ, ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳಿ ಎಂದರು.
ಕೃಷಿ ಅಧಿಕಾರಿಗಳು ಮಾಹಿತಿ ನೀಡಿ, ಜಿಲ್ಲಾದ್ಯಂತ ಶೇ.90 ಮಳೆ ಕೊರತೆ ಇದೆ. ನಗರದಲ್ಲಿ ಶೇ.8.5 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.14 ಬಿತ್ತನೆಯಾಗಿದೆ. ಕಸ್ಕೋಟಾ ಕುರಿತು ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದ್ದು, ಪ್ರತಿ ಹೊಬಳಿಯಲ್ಲಿ ಎಕರೆ ಭೂಮಿ ರೈತರಿಂದ ಪಡೆದು ಬಿತ್ತನೆ ಕಾರ್ಯ ಮಾಡಿ ಪ್ರಯೋಗ ಮಾಡಲು ಮುಂದಾಗಿದ್ದೇವೆ. ರೈತರಿಗೆ ಬೀಜ ವಿತರಣೆ ಕಾರ್ಯ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಕೃಷಿ ನಿರ್ದೇಶಕ ಸಮದ್​ ಪಟೇಲ್​, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ, ಡಿವೈಎಸ್​ಪಿ ಸಂಗಮನಾಥ ಹಿರೇಮಠ, ತಾಪಂ ಇಒಗಳಾದ ಬಸವಲಿಂಗಪ್ಪ ಡಿಗ್ಗಿ (ಕಾಳಗಿ), ಸಂತೋಷಕುಮಾರ ಚವ್ಹಾಣ (ಚಿಂಚೋಳಿ), ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್​, ಪ್ರಮುಖರಾದ ಪರಮೇಶ್ವರ ಬಿರಾದಾರ, ಉಮೇಶ ಚವ್ಹಾಣ್​, ಸುರೇಶ ತೇಗಲತಿಪ್ಪಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net