6.36 ಕೋಟಿ ರೂ. ಮೌಲ್ಯದ ಸ್ವತ್ತು ಹಸ್ತಾಂತರ

ಬೆಳಗಾವಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಾದ ಸ್ವತ್ತುಗಳನ್ನು ಆಯಾ ಮಾಲೀಕರಿಗೆ ಪೊಲೀಸ್ ಆಯುಕ್ತ ಭೂಷಣ ಬೋರಸೆ ಹಸ್ತಾಂತರಿಸಿದರು.
ಬೆಳಗಾವಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಾದ ಸ್ವತ್ತುಗಳನ್ನು ಆಯಾ ಮಾಲೀಕರಿಗೆ ಪೊಲೀಸ್ ಆಯುಕ್ತ ಭೂಷಣ ಬೋರಸೆ ಹಸ್ತಾಂತರಿಸಿದರು.
Published on
ಬೆಳಗಾವಿ: ನಗರ ಪೊಲೀಸ್ ಕಮೀಷ್ನರೇಟ್ ವತಿಯಿಂದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ಜರುಗಿದ ಪ್ರಾಪರ್ಟಿ ಪರೇಡ್‌ನಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2025ರಲ್ಲಿ ಸುಲಿಗೆ, ಸರಗಳವು, ಮನೆಗಳವು ಹಾಗೂ ವಾಹನ ಕಳವು ಪ್ರಕರಣಗಳಲ್ಲಿನ 6.36 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಆಯಾ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ 2,36,69,684 ರೂ. ಮೌಲ್ಯದ ಒಟ್ಟು 2 ಕೆಜಿ 332 ಗ್ರಾಂ 645 ಮಿ.ಗ್ರಾಂ. ಚಿನ್ನಾಭರಣ, 13,059 ರೂ. ಮೌಲ್ಯದ ಒಟ್ಟು 294 ಗ್ರಾಂ ಬೆಳ್ಳಿಯ ಆಭರಣ, 3,99,01,000 ರೂ. ಮೌಲ್ಯದ 85 ವಾಹನ (8 ಟ್ರಕ್, 14 ಚಕ್ರದ 7 ಟ್ರಕ್, 5 ಕಾರ್ ಹಾಗೂ 65 ಬೈಕ್), 1.10 ಲಕ್ಷ ರೂ. ನಗದು, 20 ಲಕ್ಷ ರೂ. ಮೌಲ್ಯ 140 ಮೊಬೈಲ್ ಸೇರಿದಂತೆ ಒಟ್ಟು 6,36,93,743 ಮೌಲ್ಯದ ಸ್ವತ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಮಾಲೀಕರಿಗೆ ಹಸ್ತಾಂತರಿಸಿದರು.
ಪೊಲೀಸ್ ಆಯುಕ್ತ ಭೂಷಣ ಬೋರಸೆ ಹಾಗೂ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆಯಾ ಠಾಣೆ ವ್ಯಾಪ್ತಿಯ ಪ್ರಕರಣಗಳ ದೂರುದಾರರನ್ನು ಆಹ್ವಾನಿಸಿ, ಸ್ವತ್ತು ಹಸ್ತಾಂತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net