ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ನಾಗಾಲೋಟ: ಡಮರು, ತ್ರಿಶೂಲ ಹಿಡಿದ ಮೋದಿ AI ವಿಡಿಯೋ ವೈರಲ್!..Assam Election Results

Assam Election Results 2026
Assam Election Results 2026
Published on

ಪ್ರಮುಖ ಮುಖ್ಯಾಂಶಗಳು

  • ​ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಸಜ್ಜಾದ ಬಿಜೆಪಿ ಮೈತ್ರಿಕೂಟ.
  • ​126 ಕ್ಷೇತ್ರಗಳ ಪೈಕಿ 101ರಲ್ಲಿ ಮುನ್ನಡೆ ಸಾಧಿಸಿ ವಿಪಕ್ಷಗಳನ್ನು ಧೂಳೀಪಟ ಮಾಡಿದ ಕೇಸರಿ ಪಡೆ.
  • ಸೋಶಿಯಲ್​ ಮೀಡಿಯಾದಲ್ಲಿ ​ ಮೋದಿ ಅವರ ಎಐ ವಿಡಿಯೋ ಮೂಲಕ ಸಂಭ್ರಮ ಹಂಚಿಕೊಂಡ ಬಿಜೆಪಿ.
Assam Election Results 2026:
ಅಸ್ಸಾಂ ವಿದಾನಸಭೆ ಚುನಾವಣೆಯಲ್ಲಿ ಚಹಾ ನಾಡಿನ ಜನರು ಬಿಜೆಪಿಯನ್ನು ನೆಚ್ಚಿಕೊಂಡಿದ್ದಾರೆ. ಹ್ಯಾಟ್ರಿಕ್​​  ಗೆಲುವಿನತ್ತ ಬಿಜೆಪಿ ಸಾಗಿದ್ದು, ಈ ಮಧ್ಯೆ ಬಿಜೆಪಿಯು ಎಕ್ಸ್​​ನಲ್ಲಿ ಪ್ರಧಾನಿ ಮೋದಿಯವರ ಶಿವನ ಅವತಾರದ ಎಐ  ವಿಡಿಯೋವೊಂದನ್ನು  ಬಿಡುಗಡೆ ಮಾಡಿದೆ. 

ಮ್ಯಾಜಿಕ್​ ನಂಬರ್​ ದಾಟಿದ ಬಿಜೆಪಿ

ಏಪ್ರಿಲ್​​9 ರಂದು ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ಲಗುಬಗೆಯಿಂದ ನಡೆಯುತ್ತಿದ್ದು, ಮಧ್ಯಾಹ್ನ 3ರವೇಳೆಗೆ ಬರೋಬ್ಬರಿ 99 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.  ಕಾಂಗ್ರೆಸ್​ ಕೇವಲ 23 ಸ್ಥಾನಗಳ ಮುನ್ನಡೆ ಕಾಯ್ದುಕೊಂಡು, ಗೆಲ್ಲುವ ನಿರೀಕ್ಷೆಯನ್ನು ಕಳೆದುಕೊಂಡಿದೆ.

ವರ್ಷಗಳ ಹಿಂದೆ ಕಾಂಗ್ರೆಸ್​ ಸುದೀರ್ಘ ಕಾಲ ಅಸ್ಸಾಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಅದೇ ಸಂಭ್ರಮ ಮರುಕಳಿಸುವ ಸಂಭ್ರಮದಲ್ಲಿದ್ದ ನಾಯಕರಿಗೆ ಕಹಿ ಸುದ್ದಿ ಸಿಕ್ಕಿದೆ. ತರುಣ್​ ಗೊಗೋಯ್​ ಅವರು ಸಿಎಂ ಆಗಿದ್ದಾಗ ಅವರ ಜೊತೆ ಬೆಂಬಲ ಕೊಡುತ್ತ ನಿಂತಿದ್ದು, ಹಿಮಂತ ಬಿಸ್ವಾ ಶರ್ಮಾ ಅವರು, ಅಂದು ಕಾಗ್ರೆಸ್​ಗೆ ಬಳಸಿದ್ದ ವಿಜಯದ ಹಾದಿಯನ್ನೇ ಈ ಬಾರಿಯೂ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 


ಅಸ್ಸಾಂನ ಪ್ರತಿ ಜಿಲ್ಲೆಯ  ಬಿಜಪಿ ಕಚೇರಿಗಳ ಮುಂದೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.ಸದ್ಯ ಅಸ್ಸಾಂ ಬಿಜೆಪಿ ಘಟಕದ ಸಂಭ್ರಮ ಮುಗಿಲು ಮುಟ್ಟಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರ ಎಐ ಜನರೇಟೆಡ್​ ವಿಡಿಯೋವೊಂದು ಭಾರಿ ವೈರಲ್ ಆಗಿದೆ. 
ಎಐ ವಿಡಿಯೋದಲ್ಲಿ ಏನಿದೆ?
 ಎಕ್ಸ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕೈಯಲ್ಲಿ ಢಮರುಗವುಳ್ಳ ತ್ರಿಶೂಲ ಹಿಡಿದು, ಆಕಾಶದತ್ತ  ತೋರುತ್ತಾರೆ. ಆಗ ಸಿಡಿಲೊಡೆದು ಶಿವನು ಪ್ರತ್ಯಕ್ಷನಾಗುತ್ತಾನೆ. ಪ್ರಧಾನಿಯವರು ಈ ಹಿಂದೆ ಕಾಶಿಗೆ ಭೇಟಿ ನೀಡಿದ್ದ ಸಂದರ್ಭದ ದೃಶ್ಯಗಳನ್ನು ಎಐ ಮೂಲಕ ಎಡಿಟ್ ಮಾಡಿ ಸಿದ್ಧಪಡಿಸಲಾದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ, (ಏಜನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net