

ಪ್ರಮುಖ ಮುಖ್ಯಾಂಶಗಳು
ಕಲ್ಯಾಣ ಕರ್ನಾಟಕದಲ್ಲಿ ಕೋಟ್ಯಂತರ ರೂ. ಸರ್ಕಾರ ಅನುದಾನ ನೀಡುತ್ತಿದ್ದರೂ ಕಾಮಗಾರಿಗಳು ಸರಿಯಾಗಿ ರೀತಿಯಲ್ಲಿ ಆಗುತ್ತಿಲ್ಲ ಎಂಬುದಕ್ಕೆ ಈ ಡಾಂಬರ್ ರಸ್ತೆಯೇ ತಾಜಾ ಉದಾಹರಣೆಯಾಗಿದೆ.
ರಸ್ತೆ ಕಾಮಗಾರಿ ಸರಿಯಾಗಿ ಮಾಡಿಲ್ಲ. ನಾಮಕೆವಾಸ್ತೆ ಎನ್ನುವಂತೆ ಮಾಡಲಾಗಿದೆ. ಡಾಂಬರ್ ದಿನದಿಂದ ದಿನಕ್ಕೆ ಕಿತ್ತು ಹೋಗುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಮತ್ತೆ ತೊಂದರೆಯಾಗಿದೆ. ಈ ಬಗ್ಗೆ ಕೇಳಿದರೆ ೫ ವರ್ಷ ನಿರ್ವಹಣೆ ಮಾಡುತ್ತೇವೆ ಎಂದು ಗುತ್ತಿಗೆದಾರರು ಹೇಳಿತ್ತಾರೆ.| ಕೃಷ್ಣಾರೆಡ್ಡಿ ಪಾಡಪಲ್ಲಿ ಗ್ರಾಮಸ್ಥ
ಈ ರಸ್ತೆ ನಿರ್ವಹಣೆ ಐದು ವರ್ಷಗಳ ಕಾಲವಾಗಿದ್ದು, ಮಳೆಯಿಂದಾಗಿ ರಸ್ತೆ ಡಾಂಬರ್ ಕಿತ್ತು ಹೋಗಿರಬಹುದು. ಆದರೆ ಅದನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಮರು ಡಾಂಬರ್ ಹಾಕಲಾಗುವುದು.| ಶ್ರೀಕಾಂತ ಬದ್ದೇಪಲ್ಲಿಗುತ್ತಿಗೆದಾರ್