ಅಸ್ಕಿ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ

ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಸ್ಕಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬಾಗಲಕೋಟೆ ವತಿಯಿಂದ ನಡೆದ ಬಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಮಾಜಿ ಶಾಸಕ ಸೋಮನಗೌಡ ಪಾಟೀಲ ಅವರು ಉದ್ಘಾಟಿಸಿದರು.  ಶ್ರೀ ನಾಥಯ್ಯ ಹಿರೇಮಠ, ಪ್ರಭುಗೌಡ ದೇಸಾಯಿ, ಜ್ಯೋತಿ ಖೋತ್ ಮತ್ತಿತರರಿದ್ದರು.
ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಸ್ಕಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬಾಗಲಕೋಟೆ ವತಿಯಿಂದ ನಡೆದ ಬಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಮಾಜಿ ಶಾಸಕ ಸೋಮನಗೌಡ ಪಾಟೀಲ ಅವರು ಉದ್ಘಾಟಿಸಿದರು. ಶ್ರೀ ನಾಥಯ್ಯ ಹಿರೇಮಠ, ಪ್ರಭುಗೌಡ ದೇಸಾಯಿ, ಜ್ಯೋತಿ ಖೋತ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಲ ಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಶ್ಲಾಘನೆ
  • ಬಹತ್ ಆರೋಗ್ಯ ಉಚಿತ ತಪಾಸಣೆ ಶಿಬಿರ
ತಾಳಿಕೋಟೆ: ಬಡವರಿಗೆ ಉಚಿತ ಹಾಗೂ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಬಾಗಲಕೋಟೆ ನಗರದಲ್ಲಿ ಅಸ್ಕಿ ಪರಿವಾರದಿಂದ ಸ್ಥಾಪಿತಗೊಂಡಿರುವ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿಯಾಗಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ನುಡಿದರು.
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಾಗಲಕೋಟೆ, ನಾರಾಯಣ ಹದಯಾಲಯ ಬೆಂಗಳೂರು ಹಾಗೂ ದಿ.ಬಿ.ಎಸ್. ಪಾಟೀಲ ಫೌಂಡೇಶನ್ ಹಾಗೂ ಕೊಣ್ಣೂರಿನ ಅಸ್ಕಿ ಕುಟುಂಬ ಪರಿವಾರದ ವತಿಯಿಂದ ಆಯೋಜಿಸಲಾದ ಬಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬೆಂಗಳೂರು, ಮುಂಬೈ ಮಹಾ ನಗರಗಳಲ್ಲಿ ಸಿಗುವ ಎಲ್ಲ ಸೌಲಭ್ಯ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ ವಿಜಯಕುಮಾರ ಅಸ್ಕಿ ಅವರು ವತ್ತಿಯಲ್ಲಿ ಅಮೆರಿಕದಲ್ಲಿ ಇಂಜಿನಿಯರ್ ಆಗಿದ್ದರೂ ಕೂಡಾ, ನಮ್ಮ ಭಾಗದ ಜನರಿಗೆ ಎಲ್ಲ ರೀತಿಯ ಸೌಲಭ್ಯ ಸಿಗಬೇಕು ಎಂದು 60 ರಿಂದ 70 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಿದ್ದಾರೆ. ಸುಮಾರು 60 ಕ್ಕೂ ಹೆಚ್ಚು ವೈದ್ಯರು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ವಿಜಯಕುಮಾರ ಅಸ್ಕಿ ಮಾತನಾಡಿ, ಅಸ್ಕಿ ಆಸ್ಪತ್ರೆಯ ಉದ್ದೇಶ ನಮ್ಮ ಭಾಗದಲ್ಲಿಯ ಬಡ ರೋಗಿಗಳಿಗೆ ತ್ವರಿತಗತಿಯಿಂದ ಚಿಕಿತ್ಸೆ ಸಿಗಲಿ ಎಂಬ ಉದ್ದೇಶದಿಂದ ಆಸ್ಪತ್ರೆ ನಿರ್ಮಿಸಲಾಗಿದೆ. ಬೆಂಗಳೂರಿನ ನಾರಾಯಣ ಹದಯಾಲಯ ಆಸ್ಪತ್ರೆ ಜೊತೆಗೂಡಿ ಚಿಕಿತ್ಸೆ ನೀಡಲು ಮುಂದಾಗಿದೆ. ಹೈಟೆಕ್ ಸೌಲಭ್ಯಗಳಿರುವ ಈ ಆಸ್ಪತ್ರೆಯಲ್ಲಿ ಅತೀ ಹೆಚ್ಚು ಬಡರೋಗಿಗಳೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ, ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಅಳವಡಿಸಿ ಆರೋಗ್ಯ ಉಚಿತ ತಪಾಸಣೆಯ ಮೂಲಕ ಬಡವರ ಮನೆಬಾಗಿಲಿಗೆ ಆಸ್ಪತ್ರೆಯ ಸೇವೆ ಮುಟ್ಟಿಸುವಂತಹ ಕಾರ್ಯ ಮಾಡಲಾಗುತ್ತಿದೆ ಎಂದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ  ಸಿ.ಬಿ. ಅಸ್ಕಿ ಮಾತನಾಡಿ, ಅಸ್ಕಿ ಫೌಂಡೇಶನ್ ನೇತತ್ವದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರವು ಕೊಣ್ಣೂರ ಗ್ರಾಮದಿಂದ ಪ್ರಾರಂಭಿಸಲಾಗಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮುದ್ದೇಬಿಹಾಳ, ಆಗಸ್ಟ್ ತಾಳಿಕೋಟೆ, ನವೆಂಬರ್‌ನಲ್ಲಿ ನಾಲತವಾಡದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.
ಕೊಣ್ಣೂರಿನ ನಾಥಯ್ಯ ಹಿರೇಮಠ, ಮಾಜಿ ಶಾಸಕ ಸೋಮನಗೌಡ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾ ಪ್ರವಾಸೋದ್ಯಮ ಉಪ ನಿರ್ದೇಶಕ ಅರವಿಂದ ಹೂಗಾರ, ಪಿಎಸ್‌ಐ ಜ್ಯೋತಿ ಖೋತ್, ಕಷಿ ನೋಡಲ್ ಅಧಿಕಾರಿ ಮಹೇಶ ಜೋಶಿ, ಆಸ್ಪತ್ರೆಯ ತಜ್ಞ ಡಾ.ಪ್ರೀತಿ ವಿಜಯ ಅಸ್ಕಿ,  ಬಿ.ಎನ್. ಹಿಪ್ಪರಗಿ, ಪ್ರಭುಗೌಡ ಮದರಕಲ್ಲ, ಎಚ್.ಎಸ್.ಪಾಟೀಲ, ಡಾ.ಬಸವರಾಜ ಅಸ್ಕಿ, ಶಂಕರಗೌಡ ಅಸ್ಕಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net