ಕಲ್ಪನೆ ಮೂಲಕ ಕಥನವನ್ನು ಮರುರೂಪಿಸುವ ಶಕ್ತಿ ಕಲಾವಿದರಲ್ಲಿ ಅಡಗಿದೆ : ಶ್ವೇತಾರಾಣಿ
Natak
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಲಬುರಗಿ ನಾಟಕೋತ್ಸವ - 2026 ರ ಅಂಗವಾಗಿ "ರಂಗಾಭಿನಯದ ಸೂಕ್ಷ್ಮತೆಗಳು ಸಂವಾದ
ಕಲಬುರಗಿ : ಕಲಾವಿದರು ತಮ್ಮ ಕಲ್ಪನೆಯ ಮೂಲಕ ಅಸ್ತಿತ್ವದಲ್ಲಿರುವ ಕಥನಗಳನ್ನು ಮರುರೂಪಿಸುವ ಶಕ್ತಿಯನ್ನು ಹೊಂದಿದೆ ಎಂದು ಹಿರಿಯ ರಂಗ ನಿರ್ದೇಶಕಿ, ನಟಿ, ಶಿಕ್ಷಕಿ ಎಚ್.ಕೆ.ಶ್ವೇತಾರಾಣಿ ಹೇಳಿದರು.
ಕಲಬುರಗಿ ನಾಟಕೋತ್ಸವ - 2026 ರ ಅಂಗವಾಗಿ "ರಂಗಾಭಿನಯದ ಸೂಕ್ಷ್ಮತೆಗಳು" ವಿಷಯದ ಸಂವಾದದಲ್ಲಿ ಮಾತನಾಡಿ,ಅಭಿನಯವು ಕೇವಲ ನಟನೆಯಲ್ಲ. ಅದು ನಮ್ಮ ದೇಹದ ಮೇಲಿರುವ ಹಳೆಯ ನಡವಳಿಕೆಗಳ ಭಾರವನ್ನು ಇಳಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ನಿರಂತರ ತರಬೇತಿ ಅಗತ್ಯ ಎಂದರಲ್ಲದೆ ನಟನೆಯ ಬಗ್ಗೆ ಇರುವ ಸವಾಲುಗಳು, ಅನುಭವ ಮತ್ತು ರಂಗಭೂಮಿಯ ಹೊಸ ಸಿದ್ಧಾಂತಗಳ ಬಗ್ಗೆ ತಿಳಿಸಿಕೊಟ್ಟರು.
ವಿಶೇಷವಾಗಿ ನಟನೆಯಲ್ಲಿ ದೇಹ ಮತ್ತು ಮನಸ್ಸಿನ ಸಮತೋಲನ ಅವಶ್ಯಕ. ಅದಕ್ಕಾಗಿ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ. ನಟನೆಯಲ್ಲಿನ ಸೂಕ್ಷ್ಮತೆಗಳನ್ನು ಗುರುತಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು 'ರಾಜ 'ನ ಪಾತ್ರ ಎಂದರೆ ಗಾಂಭೀರ್ಯ ಮತ್ತಹಾರ್ವರ್ಡ್ ಕೂಲಿ ಪಾತ್ರ ಬಾಗಿರಬೇಕು ಎಂಬ ಕಲ್ಪನೆಗಳಿವೆ. ಇದು ಪಾತ್ರಗಳಿಗಿಂತ ಹೆಚ್ಚಾಗಿ 'ಅಧಿಕಾರ' ವನ್ನು ಬಿಂಬಿಸುತ್ತದೆ ಎಂದರು.
ನಟನೆ ಎನ್ನುವುದು ಕೇವಲ ಮಾತುಗಳಲ್ಲ, ಅದು ದೇಹ, ಮನಸ್ಸು ಮತ್ತು ಕಲ್ಪನಾ ಶಕ್ತಿಯ ಸಮ್ಮಿಲನ. ತತ್ ಕ್ಷಣದ ಸ್ಪೂರ್ತಿಯ ಅಭಿನಯ ಮತ್ತು ಆಟಗಳ ಮೂಲಕ ದೇಹವನ್ನು ದಂಡಿಸುವುದು, ಮನಸ್ಸನ್ನು ಚುರುಕುಗೊಳಿಸುವುದಾಗಿದೆ. ಈ ರೀತಿಯ ನಾಟಕ ಸಂವಾದ ಯುವ ಪೀಳಿಗೆಗೆ ಹೊಸ ಉತ್ಸಾಹ ತುಂಬಲಿದೆ ಎಂದು ಅಭಿಪ್ರಾಯಪಟ್ಟರು.