೩೭೧(ಜೆ) ಕಕದ ಯುವಕರಿಗೆ ಶ್ರೀರಕ್ಷೆ

ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಧ್ವಜÁರೋಹಣ ನೆರವೇರಿಸಿದರು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಡಿಸಿ ರಾಹುಲ್ ಪಾಂಡ್ವೆ ಇತರರಿದ್ದರು.
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಧ್ವಜÁರೋಹಣ ನೆರವೇರಿಸಿದರು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಡಿಸಿ ರಾಹುಲ್ ಪಾಂಡ್ವೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಡಾ.ಪಾಟೀಲ್ ವಿಶ್ವಾಸ
  • ಯಾದಗಿರಿ ಜಿಲ್ಲಾದ್ಯಂತ ಅದ್ದೂರಿ ಉತ್ಸವ
ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಜಾರಿಯಾಗಿರುವ ಸಂವಿಧಾನ ತಿದ್ದುಪಡಿ ಕಲಂ ೩೭೧(ಜೆ) ಮುಂದಿನ ಹಲವಾರು ವರ್ಷಗಳ ಕಾಲ ಈ ಭಾಗದ ಯುವ ಜನಾಂಗಕ್ಕೆ ಶ್ರೀರಕ್ಷೆಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ಮಹಾತ್ಮ ಗಾಂಧಿಜಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲï ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಮಾತನಾಡಿದರು.
ಈ ವಿಶೇಷ ಸ್ಥಾನಮಾನ ದೊರಕಲು ಹಲವು ಹೋರಾಟಗಾರರ ಶ್ರಮವಿದೆ. ಮಾಜಿ ಸಚಿವರಾದ ದಿ.ವೈಜನಾಥ ಪಾಟೀಲ್, ವಿಶ್ವನಾಥರಡ್ಡಿ ಮುದ್ನಾಳ್ ಹೀಗೆ ಅನೇಕರು ಹೋರಾಟ ಮಾಡಿದ್ದರು. ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಬಲವಾಗಿ ಸಂವಿಧಾನದಲ್ಲಿ ಹಿಂದುಳಿದ ಪ್ರದೇಶಗಳಿಗಾಗಿ ಅಳವಡಿಸಿದ ಈ ಅಂಶದಿಂದಾಗಿ, ಅಂದಿನ ಕೇಂದ್ರ ಸಚಿವರು, ಹಾಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದ ಹಾಗೂ ಇಚ್ಛಾಶಕ್ತಿಯ ಬಲವಾಗಿ ಸಂವಿಧಾನ ತಿದ್ದುಪಡಿ ಕಲಂ ೩೭೧(ಜೆ) ಜಾರಿಯಾಗಿದ್ದು, ಈ ಭಾಗದ ಜನತೆಗೆ, ಕಟ್ಟಕಡೆಯ ವ್ಯಕ್ತಿಗೆ ಅಪಾರ ಲಾಭ ಹಾಗೂ ಕೊಡುಗೆ ನೀಡಿದೆ ಎಂದರು.
ಈ ಕಾನೂನಿನ ಮತ್ತು ನಿಯಮಗಳಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹುಟ್ಟಿದ ಪ್ರತಿ ಮಕ್ಕಳಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲು, ರಾಜ್ಯದಲ್ಲಿ ವಿವಿಧ ಸರ್ಕಾರಿ ನೌಕರಿಯಲ್ಲಿ ಶೇ.೮ ಮೀಸಲು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಶತ ೭೫ರಿಂದ ೮೫ ಮೀಸಲಾತಿಯ ಲಾಭ ದೊರೆಯಲಿದೆ ಎಂದರು. ಸುಮಾರು ೧೧ಸಾವಿರ ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ, ೩೦ ಸಾವಿರಕ್ಕೂ ಹೆಚ್ಚು ಇಂಜಿನಿಯರ್‌ಗಳಾಗಿದ್ದಾರೆ. ಸುಮಾರು ೧ ಲಕ್ಷ ಜನ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ. ಈವರೆಗೆ ರಾಜ್ಯ ಸರ್ಕಾರ ತಲಾ ೫ ಸಾವಿರ ರೂ.ಗಳಂತೆ ೧೮ಸಾವಿರ ರೂ.ಗಳ ಅನುದಾನ ಒದಗಿಸಿದ್ದು, ಈ ಕಾನೂನು ನಮ್ಮ ಯುವಜನಾಂಗಕ್ಕೆ ಶ್ರೀರಕ್ಷೆಯಾಗಿ ಪರಿಣಮಿಸಿದೆ ಎಂದು ಹೇಳಿದರು.
ತೀವ್ರ ಬರದ ಹಿನ್ನೆಲೆಯಲ್ಲಿ ರೈತರು ಆತಂಕಪಡುವ ಅವಶ್ಯಕತೆ ಇಲ್ಲ. ಸಂಪೂರ್ಣ ಜಿಲ್ಲೆ ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ರೈತರೊಂದಿಗೆ ಸರ್ಕಾರ ಇದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ, ಭೇದವಿಲ್ಲದೆ ಪ್ರಾಮಾಣಿಕ ಕೆಲಸ ನಿರ್ವಹಿಸಲಿದ್ದಾರೆ ಎಂದರು. ಈ ವೇಳೆ ಸಚಿವರು ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಯುಡಾ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಹೆಚ್ಚುವರಿ ಎಸ್‌ಪಿ ಧರಣೇಶ ಇತರರಿದ್ದರು.
ಗ್ಯಾರಂಟಿ ಯೋಜನೆ ಜಾರಿ
ರಾಜ್ಯ ಸರ್ಕಾರ ಪ್ರಗತಿಪರ ಕೆಲಸ ಮಾಡುತ್ತಿದೆ. ಬಡ ಜನರ ಹಾಗೂ ಸಾಮಾನ್ಯ ಜನರ ಹಿತ ಕಾಪಾಡಲು ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಬಡವರಪರ ಆಡಳಿತ ನೀಡಿದೆ. ಪ್ರತಿ ವರ್ಷ ೫೦ ಸಾವಿರ ಕೋ.ರೂ ಮನೆ ಬಾಗಿಲಿಗೆ ತಲುಪಿಸುತ್ತಿದೆ. ರಾಜ್ಯ ಸರ್ಕಾರವು ೩೦ ಸಾವಿರ ಹುದ್ದೆಗಳ ಭರ್ತಿಗೆ ಸಂಕಲ್ಪ ಮಾಡಿದ್ದು, ಈ ಭಾಗದ ಸಮೃದ್ಧಿಗಾಗಿ ಕಳಕಳಿ ಹೊಂದಿದೆ. ಈ ಭಾಗದಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ಹಾಗೂ ರೈತರ ಹಿತ ಕಾಪಾಡಲು ಸರ್ಕಾರ ಸದಾ ಬದ್ಧವಾಗಿದೆ ಎಂದು ಡಾ.ಪಾಟೀಲ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net