ಮೇ10ಕ್ಕೆ ಆರ್ಟ್ ಆಫ್ ಲಿವಿಂಗ್ ಧ್ಯಾನ ಮಂದಿರ ಲೋಕಾರ್ಪಣೆ

ಶ್ರೀ ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮದಿನದ ಸಂಭ್ರಮ
ಶ್ರೀ ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮದಿನದ ಸಂಭ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಮೇ10ಕ್ಕೆ ಆರ್ಟ್ ಆಫ್ ಲಿವಿಂಗ್ ಧ್ಯಾನ ಮಂದಿರ ಲೋಕಾರ್ಪಣೆ
  • ದಿ ಆರ್ಟ್ ಆಫ್ ಲಿವಿಂಗ್‌ನ 45ನೇ ವಾರ್ಷಿಕೋತ್ಸವದ ಸವಿನೆನಪು
  • ಶ್ರೀ ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮದಿನದ ಸಂಭ್ರಮ

ಬೆಂಗಳೂರು:ದಿ ಆರ್ಟ್ ಆಫ್ಲಿವಿಂಗ್‌ನ 45ನೇವಾರ್ಷಿಕೋತ್ಸವ ಹಾಗೂ ಶ್ರೀ ಶ್ರೀರವಿಶಂಕರ್ ಗುರೂಜಿಯವರ 70ನೇಜನ್ಮದಿನದ ಸಂಭ್ರಮದ ಅಂಗವಾಗಿಮೇ10 ರಂದುಧ್ಯಾನ ಮಂದಿರ ಲೋಕಾರ್ಪಣೆಗೊಳ್ಳಲಿದೆ.

ವಿಶ್ವದಅತಿ ದೊಡ್ಡ ಧ್ಯಾನ ಸಮುದಾಯವನ್ನುಪ್ರತಿನಿಧಿಸುವ,ವಿಶಿಷ್ಟ ಮತ್ತುಉನ್ನತ ತರಂಗಗಳನ್ನು ಹೊಂದಿರುವಧ್ಯಾನ ಕೇಂದ್ರವಾಗಿದ್ದು,ವಿವಿಧ ದೇಶಗಳು,ಹಿನ್ನೆಲೆಗಳುಮತ್ತು ಸಂಸ್ಕೃತಿಗಳ ಸಾವಿರಾರುಸಾಧಕರಿಗೆ, ಸಮೂಹಜಪ ಮತ್ತು ಧ್ಯಾನದ ಶಕ್ತಿಯ ಮೂಲಕಆಳವಾದ ಅಂತರಂಗದ ಶಾಂತಿಯನ್ನುಅನುಭವಿಸಲು ಈ ಧ್ಯಾನ ಮಂದಿರದಲ್ಲಿಅವಕಾಶ ಒದಗಿಸಲಾಗುತ್ತದೆ.

4 ಎಕರೆಪ್ರದೇಶದಲ್ಲಿ ಹರಡಿಕೊಂಡಿರುವಧ್ಯಾನ ಮಂದಿರವು ಸ್ತಂಭ-ರಹಿತವಿಶಾಲ ಜಾಗವನ್ನು ಹೊಂದಿದೆ.ಇತರ ಸಾಮಾನ್ಯಕಟ್ಟಡಗಳಿಗಿಂತ ಭಿನ್ನವಾಗಿ,ಇದರ ಮೇಲ್ಛಾವಣಿಯನ್ನುಸಾವಿರಾರು ಜನರು ಸುರಕ್ಷಿತವಾಗಿಕುಳಿತುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.ಏಕಕಾಲಕ್ಕೆಸುಮಾರು 2 ಲಕ್ಷಜನರು ಕುಳಿತುಕೊಳ್ಳಲು ಅವಕಾಶವಿದೆ.ಸಾಂಪ್ರದಾಯಿಕಒಳಾಂಗಣ ವಿನ್ಯಾಸದ ಬದಲಾಗಿ,ನೈಸರ್ಗಿಕ ಮತ್ತುಸಂಸ್ಕರಿಸಿದ ಬಿದಿರನ್ನು ಬಳಸಿರುವುದುಧ್ಯಾನ ಮಂದಿರದ ವಿಶೇಷತೆ.

ದಿಆರ್ಟ್ ಆಫ್ ಲಿವಿಂಗ್ 182ಕ್ಕೂಹೆಚ್ಚು ದೇಶಗಳಿಗೆ ಆಧ್ಯಾತ್ಮಿಕತೆಯನ್ನುತಲುಪಿಸುವುದರೊಂದಗೆ ಸಾಗಿಬಂದ45 ವರ್ಷಗಳಪಯಣದ ಸ್ಮರಣಾರ್ಥವಾಗಿ ಹಾಗೂಶ್ರೀಶ್ರೀ ರವಿಶಂಕರ್ ಗುರದೇವ್ಅವರ 70ನೇಜನ್ಮದಿನದ ಸಂದರ್ಭದಲ್ಲಿ ಬೃಹತ್ಧ್ಯಾನ ಮಂದಿರ ಲೋಕಾರ್ಪಣೆಗೊಳ್ಳಲಿದೆ.ಮೇ 10ರಂದು ಪ್ರಾರಂಭವಾಗುವ45ನೇವಾರ್ಷಿಕೋತ್ಸವ ಕಾರ್ಯಕ್ರಮವುಮೇ 25 ರವರೆಗೆನಡೆಯಲಿದ್ದು,ವಿವಿಧ ಕ್ಷೇತ್ರದಗಣ್ಯರು ಕಾರ್ಯಕ್ರಮದಲ್ಲಿಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net