ಕಾರು ಖರೀದಿ ನೆಪದಲ್ಲಿ 15 ಲಕ್ಷ ರೂ. ಸುಲಿಗೆ ಮಾಡಿದ್ದವರು ಅರೆಸ್ಟ್​

Arrested for extorting Rs 15 lakh on the pretext of buying a car
Arrested for extorting Rs 15 lakh on the pretext of buying a car
Published on
ಗೌರಿಬಿದನೂರು: ಕಾರು ಕೊಡಿಸುವ ನೆಪದಲ್ಲಿ 15ಲಕ್ಷ ರೂಪಾಯಿ ರೂಪಾಯಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಿಯ ವಿನಾಯಕ ನಗರ ಬಡಾವಣೆ ನಿವಾಸಿ ಯಶ್ವಂತ್​ (25), ಬೆಂಗಳೂರಿನ ರಾಜಾಜಿನಗರದ ದರ್ಶನ್​(23), ಭರತ್​(23), ರಾಮನಗರ ಜಿಲ್ಲೆಯ ಕೇತೋಹಳ್ಳಿಯ ವಿಷಕಂಠ ಮೂರ್ತಿ(40) ಬಂಧಿತರಾಗಿದ್ದು, 7.5 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಕಾರು, ಬೈಕ್​ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವೇನು?: ವಿನಾಯಕ ನಗರ ಬಡಾವಣೆಯ ಶಿವಶಂಕರ ಆರಾಧ್ಯ ಪಕ್ಕದ ಮನೆಯ ಯಶ್ವಂತ್​ ಇಬ್ಬರೂ ಸಂಬಂಧಿಕರು. ಇಬ್ಬರೂ ಸೇರಿ ಕಾರುಗಳನ್ನು ತಂದು ಬೆಂಗಳೂರಿನ ಖಾಸಗಿ ಕಂಪನಿಗಳಿಗೆ ಬಾಡಿಗೆ ಬಿಟ್ಟರೆ ಒಳ್ಳೆಯ ಸಂಪಾದನೆ ಬರುತ್ತದೆ. ನಾನು ಕೂಡ ಒಂದು ಕಾರನ್ನು ಕಂಪನಿಗೆ ಬಿಟ್ಟಿದ್ದೇನೆ. ತಿಂಗಳಿಗೆ 45 ಸಾವಿರ ರೂ. ಬಾಡಿಗೆ ಬರುತ್ತಿದೆ ಎಂದು ಯಶ್ವಂತ್​ ಹೇಳಿದ್ದಾನೆ. ಶಿವಶಂಕರ ಆರಾಧ್ಯ 2 ಕಾರು ಖರೀದಿಗೆ 15ಲಕ್ಷ ರೂ. ಹೊಂದಿಸಿಕೊಂಡು ಎರಡು ಬ್ಯಾಗ್​ಗಳಲ್ಲಿ ತುಂಬಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಸಿದ್ಧರಾಗಿದ್ದು, ಮನೆ ಬಳಿ ಕಾರಿನ ಕಡೆಗೆ ತೆರಳುತ್ತಿದ್ದಾಗ ಆರೋಪಿಗಳು ಶಿವಶಂಕರ್​ ಮುಖಕ್ಕೆ ಕಾರದ ಪುಡಿ ಎರಚಿ ಹಣದ ಬ್ಯಾಗ್​ ಕಸಿಯಲು ಪ್ರಯತ್ನಿಸಿದ್ದಾರೆ. ಬ್ಯಾಗ್​ ಬಿಡದ ಕಾರಣ ಮಚ್ಚು ತೋರಿಸಿ ಕೆಳಕ್ಕೆ ಕೆಡವಿ 7.5 ಲಕ್ಷ ರೂಪಾಯಿ ಇದ್ದ ಒಂದು ಬ್ಯಾಗ್​ ತೆಗೆದುಕೊಂಡು ಬೈಕ್​ನಲ್ಲಿ ಪರಾರಿಯಾಗಿದ್ದರು. ತಕ್ಷಣ ಶಿವಶಂಕರ್​ ಆರಾಧ್ಯ ನಗರ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು.
ನಗರ ಠಾಣೆ ಎಸ್​ಐ ಲಲಿತಮ್ಮ, ವಿ.ವರಲಕ್ಷಿ$್ಮ ಮತ್ತು ಸಿಬ್ಬಂದಿ ನಗರದಲ್ಲಿದ್ದ ಯಶ್ವಂತ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣದಾಸೆಗೆ ಸ್ನೇಹಿತರೊಂದಿಗೆ ಸೇರಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ವಶಕ್ಕೆ ಪಡೆದು 7.5 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ.
ಎಸ್ಪಿ ಕುಶಾಲ್​ ಚೌಕ್ಸೆ ಮಾರ್ಗದರ್ಶನದಲ್ಲಿ ಸಿಪಿಐಗಳಾದ ವಿ.ಅಂಜನ್​ ಕುಮಾರ್​, ಮುನಿಕೃಷ್ಣ, ಎಸ್​ಐಗಳಾದ ಲಲಿತಮ್ಮ, ವಿ.ವರಲಕ್ಷಿ$್ಮ ಮತ್ತು ಸಿಬ್ಬಂದಿ ಕೃಷ್ಣಪ್ಪ, ಮಾಲತೇಶ್​, ಮಂಜುನಾಥ, ಶ್ರೀಕಾಂತ್​, ಹನುಮಂತರಾಯಪ್ಪ ಅನಿತಮ್ಮ, ಸುಬ್ರಮಣಿ, ಕುಮಾರನಾಯಕ್​ ಒಳಗೊಂಡ ತಂಡ 3 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net