ಜೂಜಾಡುತ್ತಿದ್ದ ಆಟೋ ಚಾಲಕರಿಬ್ಬರ ಸೆರೆ

Arrest of two auto drivers who were gambling
Arrest of two auto drivers who were gambling
Published on
ಚಿಂತಾಮಣಿ: ನಗರದ ಬೆಂಗಳೂರು ವೃತ್ತದ ಬಳಿ ಜೂಜು ಅಂಕಿಗಳನ್ನು ಬರೆಯುತ್ತಿದ್ದ ಆಟೋ ಚಾಲಕ, ಹೂವಿನ ಪೇಟೆ ನಿವಾಸಿ ಮೊಹಮದ್​ ಹಾರೂನ್​ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜೂ.8ರಂದು ಜೂಜಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ನಗರ ಠಾಣೆ ಇನ್​ಸ್ಪೆಕ್ಟರ್​ ಸೂಚನೆಯಂತೆ ಎಚ್​.ಸಿ.ವೆಂಕಟರವಣ, ಪಿ.ಸಿ.ಲೋಕೇಶ ದಾಳಿ ನಡೆಸಿದ್ದಾಗ ಮೊಹಮದ್​ ಹಾರೂನ್​ 1 ರೂ.ಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಪ್ರೇರೇಪಿಸುತ್ತಾ ಮಟ್ಕಾ ಅಂಕಿ ಬರೆಯುತ್ತಿರುವುದು ಕಂಡುಬಂದಿದೆ. ಮಟ್ಕಾ ಕಟ್ಟುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದಾರೆ. ಮೊಹಮದ್​ ಹಾರೂನ್​ನನ್ನು ಪೊಲೀಸರು ಬಂಧಿಸಿ, 390 ರೂ. ನಗದು ವಶಪಡಿಸಿಕೊಂಡು, ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
275 ರೂ. ನಗದು ಜಪ್ತಿ: ನಗರದ ಮೆಹಬೂಬ್​ ನಗರ ವೃತ್ತದ ಬಳಿ ಮಟ್ಕಾ ನಡೆಸುತ್ತಿದ್ದ ಹೈದರಾಲಿ ನಗರದ ನಿವಾಸಿ, ಆಟೋ ಚಾಲಕ ಮಹಬೂಬ್​ ಪಾಷಾನನ್ನು (50) ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, 275 ರೂ. ನಗದು ಜಪ್ತಿ ಮಾಡಿದ್ದಾರೆ. ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net