ಮುಳಬಾಗಿಲು: ಶಿಕ್ಷಕರ ಕಾಲನಿ ನಿವಾಸಿ ಶ್ರೀನಿವಾಸ್ ಎಂಬುವರ ಮನೆಯಲ್ಲಿ ಜನವರಿಯಲ್ಲಿ ಬೀಗ ಒಡೆದು ಕಳವು ಪ್ರಕರಣಕ್ಕೆ ಸಂಬಂಧಿಸಿದಮತೆ ಇಬ್ಬರು ಆರೋಪಿಗಳನ್ನು ಮುಳಬಾಗಿಲು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುವಳ್ಳುವೂರು ಮೂಲದ ವೀರಪಾಂಡ್ಯನ್ (25), ಲಕ್ಷಿ$್ಮಕಾಂತನ್ (37) ಬಂಧಿತರು. ತಮಿಳುನಾಡು ಜೈಲಿನಿಂದ ಮುಳಬಾಗಿಲು ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇಬ್ಬರು ಆರೋಪಿಗಳು ಆಂದ್ರ, ತಮಿಳುನಾಡು, ಕರ್ನಾಟಕ ಭಾಗದಲ್ಲಿ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಕಳ್ಳತನ ಪ್ರಕರಣದ ಕಿಂಗ್ಪಿನ್ ಸುರೇಶ್ ತಲೆಮರೆಸಿಕೊಂಡಿದ್ದಾನೆ.