ಬೋರ್​ವೇಲ್​ ಕೇಬಲ್​ ಕದ್ದವನ ಬಂಧನ

Arrest of person who stole borewell cable
Arrest of person who stole borewell cable
Published on

ಮುಳಬಾಗಿಲು: ಪದಕಾಷ್ಟಿ ಗ್ರಾಮದಲ್ಲಿ ಬೋರ್​ವೇಲ್​ಗೆ ಅಳವಡಿಸಿದ್ದ ಕೇಬಲ್​ ವೈರ್​ ಕಳವು ಮಾಡಿದ್ದ ಅಂಬೇಡ್ಕರ್​ ನಗರದ ಚಂದ್ರಮಣಿ ಅಲಿಯಾಸ್​ ಮಣಿಯನ್ನು (41) ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜು.26ರಂದು ಜಮೀನುದಾರ ಗೋಪಿನಾಥ್​ ಅವರು ತೋಟದಲ್ಲಿದ್ದ ಸುಮಾರು 250ಮೀ ಉದ್ದದ ಕೇಬಲ್​ ವೈರ್​ ಕಳವಾಗಿರುವ ಬಗ್ಗೆ ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net