ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ಬಂಧನ

Arrest of four absconding accused
Arrest of four absconding accused
Published on
ಬಂಗಾರಪೇಟೆ: ನಗರದ ಹೊರವಲಯದ ಆರ್​.ಆರ್​.ಕಲ್ಯಾಣ ಮಂಟಪ ಪಕ್ಕದ ಪೆಟ್ರೋಲ್​ ಬಂಕ್​ ಸಮೀಪ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಪ್ರಮುಖ ಆರೋಪಿ ರೌಡಿ ಶೀಟರ್​ ಅಬಿ ನಗರ ನಿವಾಸಿಯಾಗಿದ್ದು ಇವನ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿ ಗಂಭೀರ ಪ್ರಕರಣದಾಖಲಾಗಿವೆ. ಉಳಿದ ಆರೋಪಿಗಳಾದ ಶರಣ್​, ಲಿತಿಕ್​, ಶಶಿಧರ್​ ಕೆಜಿಎಫ್​ ನಗರದ ನಿವಾಸಿಗಳಾಗಿದ್ದು, 18 ರಿಂದ 19 ವರ್ಷದೊಳಗಿನವರಾಗಿದ್ದಾರೆ.
ಇತ್ತೀಚೆಗೆ ನಗರದ ಇಂದಿರಾನಗರ ನಿವಾಸಿ ಗೋಕುಲ್​ (25) ಬೈಕ್​ಗೆ ಪೆಟ್ರೋಲ್​ ಹಾಕಿಸಿಕೊಳ್ಳಲು ತೆರಳಿದ್ದ ವೇಳೆ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಗೋಕುಲ್​ ನೀಡಿದ ದೂರಿನ ಮೇರೆಗೆ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಕೆಜಿಎಫ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಾಂಶು ರಜಪೂತ್​ ಹಾಗೂ ಡಿವೈಎಸ್ಪಿ ಲಕ್ಷ$್ಮಯ್ಯ ಮಾರ್ಗದರ್ಶನದಲ್ಲಿ ಬಂಗಾರಪೇಟೆ ಸರ್ಕಲ್​ ಇನ್​ಸ್ಪೆಕ್ಟರ್​ ರವಿಕುಮಾರ್​ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net