ಪಶ್ಚಿಮ ಬಂಗಾಳದ ಮಿದಿನಿಪುರ ತಾಲೂಕು ರಾಮೇಶ್ವರಂ ನಿವಾಸಿ ಸುಮನ್ ನ್ಯೂಗಿ (23) ಬಂಧಿತ. ತಾಲೂಕಿನ ಮಡೇರಹಳ್ಳಿಯಲ್ಲಿ ವಾಸವಿದ್ದ ಆರೋಪಿ ಖಾಸಗಿ ಕಾಲೇಜಿನಲ್ಲಿ 3ನೇ ವರ್ಷದ ನರ್ಸಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ. ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, 3 ಕೆಜಿ ಗಾಂಜಾ ವಶಪಡಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ.