ರಾಡ್​ ಹಿಡಿದು ಓಡಾಡುತ್ತಿದ್ದವನ ಬಂಧನ

Arrest of a man who was walking around with a rod
Arrest of a man who was walking around with a rod
Published on
ಚಿಂತಾಮಣಿ: ತಿಮ್ಮಸಂದ್ರ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರಾಡ್​ ಹಿಡಿದು ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮಲ್ಲಿಕಾರ್ಜುನಪುರದ ಎನ್​.ಕೃಷ್ಣ (40) ಬಂಧಿತ. ಗ್ರಾಮಾಂತರ ಠಾಣೆ ಎಎಸ್​ಐ ಪ್ರಕಾಶ್​, ಹೋಂಗಾರ್ಡ್​ ಮಂಜುನಾಥ್​ ತಿಮ್ಮಸಂದ್ರ, ಚಿನ್ನಸಂದ್ರ, ಕೈವಾರ ಕ್ರಾಸ್​, ತಳಗವಾರ ಸೇರಿ ವಿವಿಧ ಗ್ರಾಮಗಳಲ್ಲಿ ಗಸ್ತು ಮುಗಿಸಿ ಮಂಗಳವಾರ ಮುಂಜಾನೆ 4.30ರ ಸುಮಾರಿಗೆ ತಿಮ್ಮಸಂದ್ರ ಮಾರ್ಗವಾಗಿ ಠಾಣೆಗೆ ವಾಪಸ್ಸಾಗುತ್ತಿದ್ದಾಗ ತಿಮ್ಮಸಂದ್ರ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಿಂತಿದ್ದ ಎನ್​.ಕೃಷ್ಣ ಪೊಲೀಸರನ್ನು ಕಂಡು ಗಾಬರಿಯಿಂದ ಅವಿತುಕೊಳ್ಳಲು ಮತ್ತು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ದೇವಸ್ಥಾನದ ಬಳಿ ನಿಂತಿರುವುದಕ್ಕೆ ಮತ್ತು ರಾಡ್​ ಇಟ್ಟುಕೊಂಡಿರುವುದಕ್ಕೆ ಕಾರಣ ನೀಡಿಲ್ಲ. ಆದರೆ ತನ್ನ ವಿಳಾಸವನ್ನು ಒಮ್ಮೆ ಮಲ್ಲಿಕಾರ್ಜುನಪುರ ಎಂತಲೂ, ಮತ್ತೊಮ್ಮೆ ಕಂಗಾನಹಳ್ಳಿ ಎಂತಲೂ ಹೇಳಿ ಪೊಲೀಸರನ್ನು ಹಾದಿ ತಪ್ಪಿಸಲು ಯತ್ನಿಸಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net