ಯಾದಗಿರಿಯ ರಾಜೀವ್ ಗಾಂಽ ಕಾಲನಿಯಿಂದ ಡಾ.ಅಂಬೇಡ್ಕರ್ ಬಡಾವಣೆವರೆಗಿನ ರಸ್ತೆ ನಿರ್ಮಾಣಕ್ಕೆ ಹಾಕಿರುವ ಕಂಕರ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಉಮೇಶ ಆಗ್ರಹ
ರಾಜೀವ್ ಗಾಂಽ ಕಾಲನಿ ಸಂಚಾರಕ್ಕೆ ಸಂಚಕಾರ
ಯಾದಗಿರಿ:ಬಡವರು, ದುಡಿಯುವ ವರ್ಗವೇ ಹೆಚ್ಚಾಗಿ ವಾಸಿಸುವ ಇಲ್ಲಿನ ರಾಜೀವ್ ಗಾಂಽ ಕಾಲನಿಯಿಂದ ಡಾ.ಅಂಬೇಡ್ಕರ್ ಬಡಾವಣೆವರೆಗಿನ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಅಲ್ಪ, ಸ್ವಲ್ಪ ಮಾಡಿ ಹಾಗೆ ಬಿಟ್ಟಿದ್ದರಿಂದ ಅಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಶೀಘ್ರ ಉಳಿದ ಕಾಮಗಾರಿ ಪೂರ್ಣಗೊಳಿಸುವಂತೆ ಅಖಿಲ ಭಾರತೀಯ ಕೋಲಿ ಸಮಾಜದ ಕಾರ್ಯದರ್ಶಿ ಉಮೇಶ ಮುದ್ನಾಳ್ ಆಗ್ರಹಿಸಿದ್ದಾರೆ.
ಬುಧವಾರ ಬಡಾವಣೆಗಳ ನಿವಾಸಿಗಳೊಂದಿಗೆ ಈ ಹದಗೆಟ್ಟ ಏರಿಯಾಗಳಲ್ಲಿ ಸಂಚರಿಸಿ ಅಲ್ಲಿನ ಸಮಸ್ಯೆ ಕುರಿತು ಜಿಲ್ಲಾಽಕಾರಿ ಅವರಿಗೆ ಪತ್ರ ಬರೆದಿರುವ ಅವರು, ಕಳೆದ ಆರು ತಿಂಗಳಿAದ ಈ ಎರಡು ಬಡಾವಣೆಗಳ ಸಾವಿರಾರು ಜನರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಮರ್ಪಕ ರಸ್ತೆ ಇಲ್ಲದೆ ವಾಹನ ಸವಾರರ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವೃದ್ಧರು, ಮಕ್ಕಳು ತಿರುಗಾಡುವಂತಿಲ್ಲ, ಚರಂಡಿ ನೀರು ಮತ್ತು ಮಳೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆ ಬಂದ್ ಆಗಿದೆ. ಇದರಿಂದ ಶಾಲಾ ಮಕ್ಕಳಿಗೆ ಮತ್ತು ಹೊರಗಡೆ ವಿವಿಧ ಕೆಲಸಕ್ಕೆ ಹೋಗಿ ಬರುವ ಸಾರ್ವಜನಿಕರಿಗೆ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ದೂರಿದರು.
ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿದರೂ ಅರ್ಧ ಕೆಲಸ ಮಾಡಿದ ಅಽಕಾರಿ ಮತ್ತು ಗುತ್ತಿಗೆದಾರರು ಇತ್ತ ಸುಳಿಯುತ್ತಿಲ್ಲ. ಚರಂಡಿಯಲ್ಲಿ ಕಲುಷಿತ ನೀರು ನಿಂತು ಗಬ್ಬೆದ್ದು ನಾರುತ್ತಿದ್ದು, ಈ ರಸ್ತೆಯ ಅಕ್ಕ ಪಕ್ಕದ¯್ಲೆÃ ಎರಡು ಶಾಲೆಗಳಿವೆ. ಅಲ್ಲಿಗೆ ಬರುವ ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.
ಸ್ವಚ್ಛತೆ ಇಲ್ಲದ ಕಾರಣ ವಿಷ ಜಂತುಗಳು ಎಲ್ಲೆಂದರಲ್ಲಿ ಕಾಣಿಸುತ್ತಿವೆ. ಇದರಿಂದ ಜನರು ಭಯದಲ್ಲಿ ವಾಸ ಮಾಡುವ ಮತ್ತು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ಅಕ್ಕ ಪಕ್ಕದಲ್ಲಿ ಸಾರ್ವಜನಿಕರ ಸಶ್ಮಾನ ಸ್ಥಳವಿದ್ದು, ಅಂತ್ಯ ಸಂಸ್ಕಾರಕ್ಕೆ ಬರಬೇಕೆಂದರೆ ಮೂಗು ಮುಚ್ಚಿಕೊಳ್ಳುವಂತಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ತಕ್ಷಣ ಜಿ¯್ಲÁಽಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಖುದ್ದಾಗಿ ಪರಿಶೀಲಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ ಅರ್ಧ ಕೆಲಸ ಮಾಡಿದ ಅಽಕಾರಿ, ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹಾಗೊಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಯಾದಗಿರಿ-ಹೈದರಾಬಾದ್ ಮುಖ್ಯ ರಸ್ತೆ ಬಂದ್ ಮಾಡಿ ರಸ್ತೆ ತಡೆ ಚಳವಳಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಲ್ಲಿಕಾರ್ಜುನ, ಮಲ್ಲಪ್ಪ, ಮ¯್ಲÉÃಶಿ, ಶರಣು, ಸಕಲೇಶ, ಮಂಜು, ಸುಭಾಷ, ಮಹಾಂತೇಶ, ಬಸವರಾಜ ಇತರರಿದ್ದರು.
"
ನಗರದ ಪ್ರಮುಖ ರಸ್ತೆಗಳಲ್ಲಿ ತಗ್ಗು, ಗುಂಡಿಗಳು ಬಿದ್ದು ರಸ್ತೆ ಕಾಣದೇ ವಾಹನ ಸವಾರರು ಪರದಾಡುವಂತಾಗಿದೆ. ಸವಾರರು ತಗ್ಗು ತಪ್ಪಿಸಲು ಹೋಗಿ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದು, ಜಿ¯್ಲÁಡಳಿತ ತುರ್ತಾಗಿ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು.| ಉಮೇಶ ಮುದ್ನಾಳ್ಅಖಿಲ ಭಾರತೀಯ ಕೋಲಿ ಸಮಾಜದ ಕಾರ್ಯದರ್ಶಿ ಯಾದಗಿರಿ