ಕಲಾ ವಿಭಾಗದಲ್ಲಿ ಅರ್ಚನಾ ಮತ್ತು ಸಂಗೀತಾ ಸಾಧನೆ

ಅರ್ಚನಾ ಡಿ.ಎಂ. ಗೆ ತಂದೆ ಹನುಮಂತಪ್ಪ, ತಾಯಿ ರೇಣುಕಮ್ಮ ಸಿಹಿ ಹಂಚಿ ಸಂಭ್ರಮಿಸಿದರು
ಅರ್ಚನಾ ಡಿ.ಎಂ. ಗೆ ತಂದೆ ಹನುಮಂತಪ್ಪ, ತಾಯಿ ರೇಣುಕಮ್ಮ ಸಿಹಿ ಹಂಚಿ ಸಂಭ್ರಮಿಸಿದರು
Published on

ಪ್ರಮುಖ ಮುಖ್ಯಾಂಶಗಳು

  • ತಲಾ 598 ಅಂಕ ಪಡೆದ ವಿದ್ಯಾರ್ಥಿನಿಯರು
  • ಸತತ ಹನ್ನೊಂದು ವರ್ಷದಿಂದ ವಿಜಯನಗರ ಜಿಲ್ಲೆ ಪ್ರಥಮ ಸ್ಥಾನ
ಕೊಟ್ಟೂರು (ವಿಜಯನಗರ): ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಈ ಬಾರಿ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಸಾಮಾನ್ಯ ರೈತರ ಪುತ್ರಿಯರಾದ ಕೊಟ್ಟೂರಿನ ಕಾಲೇಜು ವಿದ್ಯಾರ್ಥಿನಿ ಅರ್ಚನಾ ಡಿ.ಎಂ. ಮತ್ತು ಸಂಗೀತಾ ತಲಾ 598 ಅಂಕ ಪಡೆದಿದ್ದಾರೆ. ಈ ಮೂಲಕ ವಿಜಯನಗರ ಜಿಲ್ಲೆ ಸತತ ಹನ್ನೊಂದು ವರ್ಷದಿಂದ ಮೊದಲ ಸ್ಥಾನ ಪಡೆಯುವುದನ್ನು ಮುಂದುವರಿಸಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಬಳಿಗನೂರು ಗ್ರಾಮದ ರೈತನ ಮಗಳು ಅರ್ಚನಾ ಡಿ.ಎಂ. ಎಸ್‌ಎಸ್‌ಎಲ್‌ಸಿಯಲ್ಲಿ 78.25 ಅಂಕ ಪಡೆದಿದ್ದಳು. ಪಿಯುಸಿಯಲ್ಲಿ ಕನ್ನಡದಲ್ಲಿ ಮಾತ್ರ 98 ಅಂಕ ಪಡೆದು, ಉಳಿದೆಲ್ಲ ವಿಷಯಗಳಲ್ಲಿ 100 ಅಂಕ ಪಡೆದಿದ್ದಾಳೆ. ಇನ್ನು ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಸಂಗೀತಾ ಎಸ್‌ಎಸ್‌ಎಲ್‌ಸಿಯಲ್ಲಿ 502 ಅಂಕ ಪಡೆದಿದ್ದಳು. ಕೊಟ್ಟೂರಿನ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ಮಾಡಿದ್ದ ಸಂಗೀತ ಸಂಸ್ಕೃತ ಹಾಗೂ ಇತಿಹಾಸ ವಿಷಯದಲ್ಲಿ 99 ಅಂಕ ಪಡೆದರೆ, ಉಳಿದ ಎಲ್ಲ ವಿಷಯಗಳಲ್ಲಿ 100 ಅಂಕ ಪಡೆದು ಸಾಧನೆ ಮಾಡಿದ್ದಾಳೆ. ರೈತರ ಪುತ್ರಿಯರ ಸಾಧನೆ ಇತರೆ ಮಕ್ಕಳಿಗೆ ಮಾದರಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net