

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಹಿರಿಯಸಾಹಿತಿ ಹಾಗು ಹೋರಾಟಗಾರ ಡಾ.ಅರವಿಂದಮಾಲಗತ್ತಿಯವರ ಸಾರ್ಥಕ 70ನೇಜನ್ಮದಿನದ ಅಂಗವಾಗಿ ಬೆಂಗಳೂರುನಗರ ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತು,ಕರ್ನಾಟಕ ಸಾಹಿತ್ಯಅಕಾಡೆಮಿ ಹಾಗೂ ಗೌರಮ್ಮ,ಕೆ.ವೆಂಕಟರಾಮಯ್ಯಸ್ಮಾರಕ ಪ್ರತಿಷ್ಠಾನದ ಸಹಯೋಗದಲ್ಲಿಡಾ.ಅರವಿಂದಮಾಲಗತ್ತಿ ಅವರ ಸಾಹಿತ್ಯ ವಿಚಾರಸಂಕಿರಣ ಭಾನುವಾರ ನಡೆಯಿತು.
ಕಸಾಪಆವರಣದಲ್ಲಿರುವ ಶ್ರೀಕೃಷ್ಣಪರಿಷತ್ತಿನ ಮಂದಿರದಲ್ಲಿ ನಡೆದವಿಚಾರ ಸಂಕಿರಣದಲ್ಲಿ ಮಾಲಗತ್ತಿಯವರಕಾವ್ಯ, ಕಥನಸಾಹಿತ್ಯ, ಆತ್ಮಕಥನ,ಜಾನಪದ,ವಿಮರ್ಶೆ ಹೀಗೆಎಲ್ಲ ಪ್ರಕಾರದ ಸಾಹಿತ್ಯದ ಕುರಿತುಚರ್ಚೆ ನಡೆಯಿತು.
ಸಮಾರಂಭದಮೊದಲಿಗೆ ಆಶಯ ಭಾಷಣ ಮಾಡಿದಡಾ.ಕಾ.ವೆಂ.ಶ್ರೀನಿವಾಸಮೂರ್ತಿ,ಅರವಿಂದ ಮಾಲಗತ್ತಿಯವರಸಾಹಿತ್ಯವನ್ನು ಒಂದು ಸಭಾಂಗಣದಸೀಮಿತ ಅವಧಿಯಲ್ಲಿ ಚರ್ಚೆ ನಡೆಸಲುಸಾಧ್ಯವಿಲ್ಲ.ಅದರ ಸಾಂಕೇತಿಕಚಿಂತನೆ ನಡೆಸುವ ವೇದಿಕೆ ಇಂದುನಿರ್ಮಾಣವಾಗಿದೆ.ಸಾಮಾನ್ಯವಾಗಿಸೃಜನಶೀಲತೆ,ಪಾಂಡಿತ್ಯವುಜನಪ್ರಿಯತೆಯಲ್ಲಿ ಕಳೆದು ಹೋಗುವಸಾಧ್ಯತೆ ಇರುತ್ತದೆ.ಕೀರ್ತಿ ತಡವಾದಷ್ಟುಸೃಜನಶೀಲ ಸಾಹಿತ್ಯ ಸೃಷ್ಟಿಯಾಗುತ್ತದೆ.ಆದರೆ ಮಾಲಗತ್ತಿಯವರುಜನಪ್ರಿಯತೆಯ ಬಗ್ಗೆ ತಲೆಕೆಡಿಸಿಕೊಂಡವರಲ್ಲ.ಅವರ ಮೊದಲ ಕೃತಿಗೌರ್ನಮೆಂಟ್ ಬ್ರಾಹ್ಮಣದಿಂದಆರಂಭವಾಗಿ ಇಂದಿನವರೆಗೆ ಸೃಜನಶೀಲತೆಕಳೆದುಕೊಂಡಿಲ್ಲ.ಅಧ್ಯಾಪಕರಾಗಿರುವಮಾಲಗತ್ತಿಯವರು ಹಲವು ವಿಶ್ವವಿದ್ಯಾಲಯಗಳಲ್ಲಿಕೆಲಸ ಮಾಡಿದ್ದಾರೆ.ಆದರೆ ಜನತಾವಿವಿಯಲ್ಲಿ ಅವರು ಮಾಡಿದ ಕೆಲಸವಿಶಿಷ್ಟ. ಇಲ್ಲಿಕಾರ್ಲ್ ಮಾರ್ಕ್ಸ್,ಲೋಹಿಯಾ,ಬಸವಣ್ಣ,ಕುವೆಂಪು ಮತ್ತಿತರರುಕುಲಪತಿಗಳಾಗಿದ್ದರು ಎಂದುಮಾಲಗತ್ತಿಯವರ ಚಿಂತನೆಗಳನ್ನುವಿವರಿಸಿದರು.
ಕಾವ್ಯದಕುರಿತು ಕವಿ ಡಾ.ಎಚ್.ಲಕ್ಷ್ಮೀನಾರಾಯಣಸ್ವಾಮಿ,ಕಥನ ಸಾಹಿತ್ಯದಕುರಿತು ಡಾ.ರಾಜಪ್ಪದಳವಾಯಿ, ಆತ್ಮಕಥನದಕುರಿತು ಸಾಹಿತಿ ಡಾ.ಕೆ.ಷರೀಾ,ಜಾನಪದ ಸಾಹಿತ್ಯಕುರಿತು ಡಾ.ಎಂ.ಬೈರೇಗೌಡ,ವಿಮರ್ಶೆ ಕುರಿತುಡಾ.ರಾಜಶೇಖರಮಠಪತಿ ವಿಷಯ ಮಂಡನೆ ಮಾಡಿದರು.ಕಾರ್ಯಕ್ರಮದಲ್ಲಿಸಾಹಿತಿ ದಂಪತಿಗಳಾದ ಡಾ.ಅರವಿಂದಮಾಲಗತ್ತಿ,ಡಾ.ಧರಣಿದೇವಿಮಾಲಗತ್ತಿ,ನಿವೃತ್ತ ಪೊಲೀಸ್ಅಧಿಕಾರಿ ಬಸವರಾಜ ಮಾಲಗತ್ತಿಮತ್ತಿತರರು ಪಾಲ್ಗೊಂಡಿದ್ದರು.