ಅರಸು ರಾಜ್ಯ ಕಂಡ ಕ್ರಿಯಾಶೀಲ ನಾಯಕ

ಯಾದಗಿರಿಯಲ್ಲಿ ಗುರುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲÆರ, ಡಿವೈಎಸ್‌ಪಿ ಸುರೇಶ ನಾಯಕ, ಜ್ಯೋತಿಲತಾ ತಡಿಬಿಡಿಮಠ ಇತರರಿದ್ದರು.
ಯಾದಗಿರಿಯಲ್ಲಿ ಗುರುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲÆರ, ಡಿವೈಎಸ್‌ಪಿ ಸುರೇಶ ನಾಯಕ, ಜ್ಯೋತಿಲತಾ ತಡಿಬಿಡಿಮಠ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಬಣ್ಣನೆ
  • ಜಿಲ್ಲಾಡಳಿತದಿಂದ ಜಯಂತಿ ಆಚರಣೆ
ಯಾದಗಿರಿ: 

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ರಾಜ್ಯ ಕಂಡ ಅತ್ಯಂತ ಕ್ರೀಯಾಶೀಲ ಮತ್ತು ಹಲವು ಸುಧಾರಣೆಗಳ ಹರಿಕಾರರಾಗಿದ್ದಾರೆ ಎಂದು ಜಿಲ್ಕಾಲಾಧಿರಿ ರಾಹುಲ್ ಪಾಂಡ್ವೆ ಬಣ್ಣಿಸಿದರು.

ಜಿಲ್ಡಲಾಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡ ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾಜಿಕ ಸುಧಾರಕರಾಗಿದ್ದ ಅವರು, ಎರಡು ಬಾರಿ ಮುಖ್ಯಮಂತ್ರಿಯಾಗಿ, ಹಿಂದುಳಿದ ವರ್ಗ ಹಾಗೂ ದೀನ ದಲಿತರ ಪರ ಐತಿಹಾಸಿಕ ಸುಧಾರಣೆಗಳನ್ನು ತಂದು ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಚಿತ್ರಣವನ್ನೇ ಬದಲಾಯಿಸಿದ್ದಾರೆ ಎಂದು ಹೇಳಿದರು.
ಬಡ ಕುಟುಂಬಗಳಿಗೆ ಭಾಗ್ಯಜ್ಯೋತಿ ಉಚಿತ ವಿದ್ಯುತ್ ಸಂಪರ್ಕ ನೀಡುವ ಮೂಲಕ ಲಕ್ಷಾಂತರ ಜನರಲ್ಲಿ ಬೆಳಕಾದರು. ಊಳುವವನೇ ಭೂಮಿ ಒಡೆಯ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಲಕ್ಷಾಂತರ ಬಡ ರೈತರಿಗೆ ಭೂಮಿ ಕೊಡಿಸಿದರು. ಹಾವನೂರು ವರದಿ ಆಧರಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದರು. ಸಮಾಜದ ಅಂಚಿನಲ್ಲಿರುವ ಶೋಷಿತರು ಹಾಗೂ ಪರಿಶಿಷ್ಟರಿಗೆ ರಾಜಕೀಯ ಮತ್ತು ಸಾಮಾಜಿಕ ಧ್ವನಿ ನೀಡಿದರು. ರಾಜ್ಯದಲ್ಲಿ ಕೈಗಾರಿಕೆ ಹಾಗೂ ಆಡಳಿತಾತ್ಮಕ ಸುಧಾರಣೆಗಳಿಗೆ ಭದ್ರವಾದ ಬುನಾದಿ ಕೂಡ ಹಾಕಿದರು ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಜ್ಯೋತಿಲತಾ ತಡಿಬಿಡಿಮಠ ಅವರು, ೧೯೧೫ರ ಆ.೨೦ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದ ಇವರು, ಮೈಸೂರು ವಿಶ್ವ ವಿದ್ಯಾನಿಲಯದಿಂದ ವಿಜ್ನಾನ ಪದವಿ ಪಡೆದು, ಆರಂಭದಲ್ಲಿ ತಮ್ಮ ಹಳ್ಳಿಯಲ್ಲಿಯೇ  ಕೃಷಿ ಕಾಯಕ ಮಾಡಿದರು. ಸಾರ್ವಜನಿಕ ಜೀವನದಲ್ಲಿ ಆಸಕ್ತಿ ಹೊಂದಿದ್ದ ಅರಸು, ೧೯೪೧ರಿಂದ ೧೯೪೮ರವರೆಗೆ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಽ ಸಭೆಯ ಸದಸ್ಯರಾದರು. ೧೯೫೨ರಲ್ಲಿ ಚುನಾವಣೆಗೆ ಸ್ಪಽðಸಿ ಶಾಸಕರಾದರು. ದಕ್ಷ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿ ಬೆಳೆದರು. ೧೯೭೨ರಿಂದ ೧೯೭೭ರವರೆಗೆ ಮೊದಲ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪೂರ್ಣಾವದಿ ಪೂರೈಸಿದರು. ೧೯೭೮ರಿಂದ ೧೯೮೦ರವರೆಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು ಎಂದರು.
ಈ ವೇಳೆ ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್‌ಪಿ ಸುರೇಶ ನಾಯಕ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಽಕಾರಿ ಸದಾಶಿವಪ್ಪ ಎಂ.ನಾರಾಯಣಕರ್ ಇತರರಿದ್ದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಽಕಾರಿ ಸಂತೋಷ ರೆಡ್ಡಿ ಸ್ವಾಗತಿಸಿದರು. ಗುರುಪ್ರಸಾದ ವೈದ್ಯ ನಿರೂಪಿಸಿ ವಂದಿಸಿದರು.

ಹೊಸ ದಾಖಲೆ ಬರೆದರು

ದೇಶದ ಉದ್ಧಾರ ಎಂದರೆ ಹಿಂದುಳಿದವರ ಮತ್ತು ರೈತರ ಉದ್ಧಾರ ಎಂಬ ಚಿಂತನೆ ಮೈಗೂಡಿಸಿಕೊಂಡು ಅವುಗಳನ್ನು ಕಾರ್ಯಗತ ಮಾಡಿ ಆಡಳಿತದ ವ್ಯವಸ್ಥೆಯಲ್ಲಿಯೇ ಹೊಸ ದಾಖಲೆ ಬರೆದಿದ್ದಾರೆ ಎಂದು ಜಿಲ್ಲಾಽಕಾರಿ ಪಾಂಡ್ವೆ ವಿವರಿಸಿದರು.
"

ಮೈಸೂರು ರಾಜ್ಯವು ೧೯೭೩ ನ.೧ರಂದು ಕರ್ನಾಟಕ ಎಂದು ಅಽಕೃತವಾಗಿ ಮರು ನಾಮಕರಣಗೊಂಡಾಗ ಇವರೇ ಮುಖ್ಯಮಂತ್ರಿಯಾಗಿದ್ದು ವಿಶೇಷವಾಗಿತ್ತು. ಜನಪರ ಹಾಗೂ ಕ್ರಾಂತಿಕಾರಿ ಚಿಂತನೆಗಳು ಇಂದಿಗೂ ಕರ್ನಾಟಕದ ರಾಜಕೀಯದಲ್ಲಿ ಮಾದರಿಯಾಗಿವೆ.| ಜ್ಯೋತಿಲತಾ ತಡಿಬಿಡಿಮಠಶಿಕ್ಷಕಿ ಯಾದಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net