ಖಾಲಿಯಿರುವ 3,395 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

AI Photo
AI Photo
Published on

ಪ್ರಮುಖ ಮುಖ್ಯಾಂಶಗಳು

  • ಜೂ.8ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ
  • ಅರ್ಜಿ ಸಲ್ಲಿಕೆಗೆ ಜುಲೈ 3 ಕೊನೆ ದಿನ, ಶುಲ್ಕ ಪಾವತಿಸಲು ಜುಲೈ 4 ಕೊನೆ ದಿನ
  • ಆಗಸ್ಟ್ 2ರ ಬೆಳಗ್ಗೆ 10.30ರಿಂದ 12ರ ವರೆಗೆ ಲಿಖಿತ ಪರೀಕ್ಷೆ

ಬೆಂಗಳೂರು : ರಾಜ್ಯಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ3,395 ಸಿವಿಲ್ ಪೊಲೀಸ್ಕಾನ್‌ಸ್ಟೇಬಲ್ ಹುದ್ದೆಗಳ ಭರ್ತಿಗೆಸರ್ಕಾರ ಅಧಿಸೂಚನೆ ಹೊರಡಿಸಿದೆ.

2,266 ಪುರುಷ,755 ಮಹಿಳಾ, 257 ಸೇವಾನಿರತಪುರುಷ, 82 ಸೇವಾನಿರತಮಹಿಳಾ, 35 ತೃತೀಯಲಿಂಗಅಭ್ಯರ್ಥಿಗಳ ಹುದ್ದೆಗಳು ಖಾಲಿಇವೆ. ಮುಂಬರುವ ಆಗಸ್ಟ್2ರ ಬೆಳಗ್ಗೆ 10.30ರಿಂದ12ರ ವರೆಗೆ ಲಿಖಿತಪರೀಕ್ಷೆ ನಡೆಯಲಿವೆ.

ಕರ್ನಾಟಕಪರೀಕ್ಷಾ ಪ್ರಾಧಿಕಾರ (ಕೆಇಎ)ಲಿಖಿತ ಪರೀಕ್ಷೆ ನಡೆಸಲಿದೆ.ಜೂ.8ರಿಂದಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಕೆಗೆ ಜುಲೈ3 ಕೊನೆ ದಿನವಾದರ‌್ದೆ,ಶುಲ್ಕ ಪಾವತಿಸಲು ಜುಲೈ4 ಕೊನೆ ದಿನ.

ಅಭ್ಯರ್ಥಿಗಳುಕನಿಷ್ಠ 18 ವರ್ಷಪೂರೈಸಿರಬೇಕು. ಗರಿಷ್ಠವಯೋಮಿತಿಯು ಮೀಸಲಾತಿ ಅನ್ವಯನಿಗದಿಪಡಿಸಲಾಗಿದ್ದು, ಸಾಮಾನ್ಯವರ್ಗದವರಿಗೆ (33), ಎಸ್ಸಿ-ಎಸ್ಟಿಹಾಗೂ ಹಿಂದುಳಿದ ವರ್ಗಕ್ಕೆ (35)ಇನ್ನು ಅರಣ್ಯ ಪ್ರದೇಶದಬುಡಕಟ್ಟು ಅಭ್ಯರ್ಥಿಗಳು 38ವರ್ಷಮೀರಿರಬಾರದು.

ಪರೀಕ್ಷಾಶುಲ್ಕವು ಸಾಮಾನ್ಯ, 2,2ಬಿ, 3,3ಬಿ ಅಭ್ಯರ್ಥಿಗಳು 750ರೂ.ಗಳು,ಪರಿಶಿಷ್ಟ ಜಾತಿ,ಪಂಗಡ, ಪ್ರವರ್ಗ-1,ಮಾಜಿ ಸೈನಿಕರು ಮತ್ತುತೃತೀಯ ಲಿಂಗಿಗಳಿಗೆ 500 ರೂ.ಪಾವತಿಸಬೇಕು.

ಪರೀಕ್ಷೆಯಲ್ಲಿಸಾಮಾನ್ಯಜ್ಞಾನ, ಭಾರತಸಂವಿಧಾನ, ಸ್ವಾತಂತ್ರ್ಯಚಳವಳಿ, ರಾಜ್ಯದಇತಿಹಾಸ, ಭೂಗೋಳ,ಅರ್ಥಶಾಸ್ತ್ರ,ಸಂಸ್ಕೃತಿ ಮತ್ತು ಸಾಹಿತ್ಯವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳುಇರಲಿವೆ. ಒಟ್ಟು 100ಪ್ರಶ್ನೆಗಳು, 100 ಅಂಕಗಳುಮತ್ತು 90 ನಿಮಿಷಗಳಅವಧಿ ನಿಗದಿಯಾಗಿದೆ. ತಪ್ಪುಉತ್ತರಕ್ಕೆ 0.25 ಅಂಕಗಳನಕಾರಾತ್ಮಕ ಮೌಲ್ಯಮಾಪನ ಅನ್ವಯವಾಗಲಿದೆ.

ಅಭ್ಯರ್ಥಿಗಳುದೇಹದಾರ್ಢ್ಯತೆ ಮತ್ತು ಸಹನಶಕ್ತಿಪರೀಕ್ಷೆಗಳಲ್ಲಿ ಭಾಗವಹಿಸಬೇಕಾಗಿದ್ದು,ಪುರುಷ ಅಭ್ಯರ್ಥಿಗಳಿಗೆಕನಿಷ್ಠ ಎತ್ತರ 168 ಸೆಂ.ಮೀ.ಮತ್ತು ಮಹಿಳಾ ಅಭ್ಯರ್ಥಿಗಳಿಗೆ157 ಸೆಂ.ಮೀ.ಇರಬೇಕು. ಪುರುಷರು1600 ಮೀಟರ್ ಓಟವನ್ನು6 ನಿಮಿಷ 30 ಸೆಕೆಂಡಿನೊಳಗೆಪೂರ್ಣಗೊಳಿಸಬೇಕು. ಎತ್ತರಜಂಪ್ ಕನಿಷ್ಠ 1.20ಮೀಮತ್ತು ಅಡ್ಡ ಜಂಪ್ 3.80 ಮೀಟರ್ಇರಬೇಕು. ಮಹಿಳಾಅಭ್ಯರ್ಥಿಗಳಿಗೆ ಎತ್ತರ ಜಂಪ್0.90ಮೀ. ಮತ್ತುಅಡ್ಡ ಜಂಪ್ 2.50ಮೀ.ಇರಬೇಕು.

ಅಭ್ಯರ್ಥಿಗಳಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿಪಾರದರ್ಶಕವಾಗಿದ್ದು, ಅರ್ಹಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ಮಾಡುವ ಪ್ರಕ್ರಿಯೆ 1:5 ಅನುಪಾತದಲ್ಲಿನಡೆಯಲಿದೆ. ಆಯ್ಕೆಯಾದಅಭ್ಯರ್ಥಿಗಳು ದೇಹದಾರ್ಢ್ಯತೆಮತ್ತು ಸಹನಶಕ್ತಿ ಪರೀಕ್ಷೆಗಳಲ್ಲಿಭಾಗವಹಿಸಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ08023460460 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net