ಇದಲ್ಲದೆ, ಗ್ರಾಮೀಣ, ಕನ್ನಡ ಮಾಧ್ಯಮ ವ್ಯಾಸಂಗ ಇತ್ಯಾದಿ ಕ್ಲೇಮ್ ಮಾಡುವವರು ಅಗತ್ಯ ನಮೂನೆಗಳಲ್ಲಿ ಪ್ರಮಾಣ ಪತ್ರಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗ್ರಾಮೀಣ ಕೋಟಾ ಕ್ಲೇಮ್ ಮಾಡಬಯಸಿದರೆ ಕಡ್ಡಾಯವಾಗಿ ನಾನ್ ಕ್ರಿಮಿ ಲೇಯರ್ ಪ್ರಮಾಣಪತ್ರವನ್ನು ಹೊಂದಿರಬೇಕು. ಇದಲ್ಲದೆ, ಅರ್ಜಿ ಜತೆ ಅಪ್‌ಲೋಡ್ ಮಾಡುವ ಚಿತ್ರ ಮತ್ತು ಸಹಿ 50 ಕೆಬಿ ಒಳಗಿರಬೇಕು.