ಹೊರಕಾಣಿಕೆ ಸಮರ್ಪಣೆ ಮೆರವಣಿಗೆ ಅದ್ದೂರಿ

ಮುನವಳ್ಳಿಯಲ್ಲಿ ಹರಿನಾಮ ಸಪ್ತಾಹ ಅಂಗವಾಗಿ ಭಕ್ತರು ನೀಡಿದ ಹೊರಕಾಣಿಕೆ ಸಮರ್ಪಣೆ ಮೆರವಣಿಗೆಗೆ ಮುಕ್ತಾನಂದ ಸ್ವಾಮೀಜಿ ಚಾಲನೆ ನೀಡಿದರು. ಶೃತಿ ವೈದ್ಯ, ಶುಭಾ ಬ್ಯಾಹಟ್ಟಿ, ದೀಪಾ ಯಲಿಗಾರ, ಕಲ್ಲಪ್ಪ ಕಿತ್ತೂರ, ಪಂಚಪ್ಪ ಸುಣಗಾರ ಇತರರಿದ್ದರು.
ಮುನವಳ್ಳಿಯಲ್ಲಿ ಹರಿನಾಮ ಸಪ್ತಾಹ ಅಂಗವಾಗಿ ಭಕ್ತರು ನೀಡಿದ ಹೊರಕಾಣಿಕೆ ಸಮರ್ಪಣೆ ಮೆರವಣಿಗೆಗೆ ಮುಕ್ತಾನಂದ ಸ್ವಾಮೀಜಿ ಚಾಲನೆ ನೀಡಿದರು. ಶೃತಿ ವೈದ್ಯ, ಶುಭಾ ಬ್ಯಾಹಟ್ಟಿ, ದೀಪಾ ಯಲಿಗಾರ, ಕಲ್ಲಪ್ಪ ಕಿತ್ತೂರ, ಪಂಚಪ್ಪ ಸುಣಗಾರ ಇತರರಿದ್ದರು.
Published on
ಮುನವಳ್ಳಿ: ಪಟ್ಟಣದ ಕುಮಾರೇಶ್ವರ ವಿದ್ಯಾ ಮಂದಿರದಲ್ಲಿ ಮೇ 17ರಿಂದ ಮೇ 23 ರವರೆಗೆ ಹಮ್ಮಿಕೊಂಡಿರುವ ಜ್ಞಾನೇಶ್ವರ ಸಾಮೂಹಿಕ ಪಾರಾಯಣ ಹಾಗೂ ಹರಿನಾಮ ಸಪ್ತಾಹ ಮಹೋತ್ಸವದ ಅಂಗವಾಗಿ ಭಾನುವಾರ "ಹೊರಕಾಣಿಕೆ ಸಮರ್ಪಣೆ' ಮೆರವಣಿಗೆ ಯಶಸ್ವಿಯಾಗಿ ಜರುಗಿತು.
ಸ್ಥಳಿಯ ಕರೆಮ್ಮಾದೇವಿ ದೇವಸ್ಥಾನ ದಿಂದ ಆರಂಭವಾದ ಮೆರವಣಿಗೆಗೆ ಶಿಂದೋಗಿ ಮುಕ್ತಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಶೃತಿ ವಿಶ್ವಾಸ ವೈದ್ಯ, ಶುಭಾ ವಿರೇಶ ಬ್ಯಾಹಟ್ಟಿ, ದೀಪಾ ರವೀಂದ್ರ ಯಲಿಗಾರ, ಸುಮಾ ಮಹೇಶ ಯಲಿಗಾರ ಚಾಲನೆ ನೀಡಿದರು.
ವಾರಕರಿ ಸಂತ ಮಂಡಳಿ ಹಾಗೂ ಭಕ್ತಾದಿಗಳ ಭಜನೆ, ಕೀರ್ತನೆ ನಡೆಯಿತು. ಗ್ರಾಮಸ್ಥರು ದವಸ ಧಾನ್ಯ, ತೆಂಗಿನಕಾಯಿ, ಹಣ್ಣು ಹಾಗೂ ವಿವಿಧ ಪೂಜಾ ಸಾಮಗ್ರಿಗಳನ್ನು ಭಕ್ತಿಭಾವದಿಂದ ಸಮರ್ಪಿಸಿದರು.
ಮೆರವಣಿಗೆಯ ಆಯೋಜಕರಾದ ಕಲ್ಲಪ್ಪ ಕಿತ್ತೂರ, ಪಂಚಪ್ಪ ಸುಣಗಾರ, ಶ್ರೀಕಾಂತ ಮಿರಜಕರ, ಸತೀಶ ರೇಣಕೆ, ಮೋಹನ ಕಾಮಣ್ಣವರ, ಪಂಚಪ್ಪ ಗುಂಡ್ಲೂರ, ವಿಠ್ಠಲ ನಲಗೆ, ಬಸವರಾಜ ಚುಳಕಿ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಚಂದ್ರು ಮುಚ್ಚಂಡಿ, ನಿಂಗಪ್ಪ ಮಾಟನವರ, ಬಸನಗೌಡ ಪಾಟೀಲ, ಮಂಜು ಮುಗಳಿ, ನಾಮದೇವ ಸುಲಾಖೆ, ಭರತಗೌಡ ಪಾಟೀಲ, ಪ್ರವಿಣ ಕಾಮಣ್ಣವರ, ಪಂಚಪ್ಪ ಗಂಗನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net