ನಿವೇಶನರಹಿತರಿಗೆ ಸೂರು ಕಲ್ಪಿಸಲು ಪಟ್ಟು / DODABALLAPU

ದೊಡ್ಡಬಳ್ಳಾಪುರದ ತಾಪಂ ಆವರಣದಲ್ಲಿ ನಿವೇಶನ ರಹಿತರಿಗೆ ಸೂರು ಕಲ್ಪಿಸಲು ಒತ್ತಾಯಿಸಿ ಶಾಸಕ ಧೀರಜ್​ ಮುನಿರಾಜು ಅವರಿಗೆ ಕರವೇ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಎಸ್​.ಎಲ್​.ವೇಣು , ತಾಲೂಕು ಅಧ್ಯಕ್ಷ ಹಮಾಮ್​ ವೆಂಕಟೇಶ್​, ಕಾರ್ಯಾಧ್ಯಕ್ಷ ಜೋಗಹಳ್ಳಿ ಅಮ್ಮು, ಯುವ ಘಟಕ ಅಧ್ಯಕ್ಷ ಹೇಮಂತ್​, ಉಪಾಧ್ಯಕ್ಷ ಕೆ.ಆರ್​.ಮಂಜುನಾಥ್​, ಎಸ್​.ಎಂ.ಆನಂದ್​ ಕುಮಾರ್​, ಖಜಾಂಚಿ ರವಿ ಮುಕ್ಕೇನಹಳ್ಳಿ ಇತರರು ಇದ್ದರು.
ದೊಡ್ಡಬಳ್ಳಾಪುರದ ತಾಪಂ ಆವರಣದಲ್ಲಿ ನಿವೇಶನ ರಹಿತರಿಗೆ ಸೂರು ಕಲ್ಪಿಸಲು ಒತ್ತಾಯಿಸಿ ಶಾಸಕ ಧೀರಜ್​ ಮುನಿರಾಜು ಅವರಿಗೆ ಕರವೇ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಎಸ್​.ಎಲ್​.ವೇಣು , ತಾಲೂಕು ಅಧ್ಯಕ್ಷ ಹಮಾಮ್​ ವೆಂಕಟೇಶ್​, ಕಾರ್ಯಾಧ್ಯಕ್ಷ ಜೋಗಹಳ್ಳಿ ಅಮ್ಮು, ಯುವ ಘಟಕ ಅಧ್ಯಕ್ಷ ಹೇಮಂತ್​, ಉಪಾಧ್ಯಕ್ಷ ಕೆ.ಆರ್​.ಮಂಜುನಾಥ್​, ಎಸ್​.ಎಂ.ಆನಂದ್​ ಕುಮಾರ್​, ಖಜಾಂಚಿ ರವಿ ಮುಕ್ಕೇನಹಳ್ಳಿ ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ಆಶ್ರಯ ನಿವೇಶನ ಹಾಗೂ ವಿವಿಧ ವಸತಿ ಯೋಜನೆಯಡಿ ಮಂಜೂರಾಗಿರುವ ಜಮೀನಿನಲ್ಲಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸುವಲ್ಲಿ ಕೆಲವು ಗ್ರಾಪಂಗಳು ರ್ನಿಲಕ್ಷ್ಯ ತೋರುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ ಕುಮಾರ್​ ಶೆಟ್ಟಿ ಬಣ) ತಾಲೂಕು ಘಟಕದಿಂದ ತಾಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಅಧ್ಯಕ್ಷ ಹಮಾಮ್​ ವೆಂಕಟೇಶ್​ ಮಾತನಾಡಿ, ಗ್ರಾಮೀಣ ಪ್ರದೇಶದ ನಿವೇಶನ ರಹಿತ ಬಡವರಿಗೆ ಆದ್ಯತೆ ಮೇರೆಗೆ ಶೀಘ್ರ ಆಶ್ರಯ ಯೋಜನೆಯಲ್ಲಿ ನಿವೇಶನ ಹಂಚಿಕೆ ಮಾಡಿ, ಸೂರು ಕಲ್ಪಿಸಲು ರಾಜೀವ್​ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಸಂಸ್ಥೆ ಇದೆ. ಆದರೆ ಸರ್ಕಾರಿ ಜಾಗ ಗುರುತಿಸಿ ಬಡಾವಣೆಯಾಗಿ ಅಭಿವೃದ್ಧಿಪಡಿಸಿ ನಿವೇಶನರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ಹಂಚಲು ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಮೀನು ಮಂಜೂರಾಗದೇ ಇದ್ದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗವನ್ನು ಗುರುತಿಸಿ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಬೇಕು. ಆದರೆ ಕೆಲವು ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳ ರ್ನಿಲಕ್ಷ$್ಯ ಎದ್ದುಕಾಣುತ್ತಿದೆ. ಈ ಬಗ್ಗೆ ತಾಲೂಕು ಶಾಸಕರು ಹಾಗೂ ದಂಡಾಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಕನಸವಾಡಿ ಗ್ರಾಪಂ ವ್ಯಾಪ್ತಿಗೆ ಸೇರಿದ ರಾಮದೇವನಹಳ್ಳಿ ಸರ್ವೇ ನಂ.100ರಲ್ಲಿ 9-20ಎ/ಗುಂಟೆ, ದೊಡ್ಡಬೆಳವಂಗಲ ಹೋಬಳಿಯ ಭಕ್ತರಹಳ್ಳಿ ಸರ್ವೇ ನಂ.39, ಹೊಸಹಳ್ಳಿ ಸರ್ವೇ ನಂ.55, ನಾಗಸಂದ್ರದ ಸರ್ವೇ ನಂ.24/2, ಬಚ್ಚಹಳ್ಳಿ ಸರ್ವೇ ನಂ.10, ಶಿವಪುರದ ಸರ್ವೇ ನಂ.133, 134, ಸೊಣ್ಣಪ್ಪನಹಳ್ಳಿ ಸರ್ವೇ ನಂ.53, ಚಿಕ್ಕಬೆಳವಂಗಲ ಸರ್ವೇ ನಂ.108, ದೊಡ್ಡಹೆಜ್ಜಾಜಿ ಸರ್ವೇ ನಂ.148, ಚುಂಚೇಗೌಡನ ಹೊಸಹಳ್ಳಿ ಸರ್ವೇ ನಂ.58/1, ಮಧುರನಹೊಸಹಳ್ಳಿ ಸರ್ವೇ ನಂ.10, ಕೂಗೋನಹಳ್ಳಿ ಸರ್ವೇ ನಂ.64, ಪಿಂಡಕೂರತಿಮ್ಮನಹಳ್ಳಿ ಸರ್ವೇ ನಂ.13, ಸರ್ಕಾರಿ ಜಾಗ ಇದ್ದು, ಪಹಣಿಯಲ್ಲಿ ಆಶ್ರಯ ನಿವೇಶನ ಯೋಜನೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವರ್ಗಾಯಿಸಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಜಮೀನು ಅಭಿವೃದ್ಧಿ ಪಡಿಸದೇ ನಕ್ಷೆಯಿಲ್ಲ, ಸಿವಿಲ್​ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ. ಫಲಾನುಭವಿಗಳ ಆಯ್ಕೆ ಬಾಕಿ ಇದೆ, ಈ ಜಾಗದಲ್ಲಿ ತಕರಾರು ಇದೆ, ಹದ್ದುಬಸ್ತು ಆಗಿರುವುದಿಲ್ಲವೆಂಬ ಕುಂಟು ನೆಪ ಹೇಳುತ್ತಿದ್ದು, ಇದನ್ನು ಕರವೇ ಖಂಡಿಸುತ್ತದೆ ಎಂದರು.
ಕೂಡಲೇ ತಾಲೂಕು ಪಂಚಾಯಿತಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಭೂಮಾಪನ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿಗಳ ಮುಂದೆ ಹೋರಾಟ ಮಾಡಲಾಗುವುದು ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಬಶೀರ್​, ಮುಖಂಡರಾದ ಶ್ರೀನಿವಾಸ್​, ಸೂರ್ಯನಾರಾಯಣ, ದಾದಾಫಿರ್​, ಡಿ.ಕೆ.ಬಾಬಾ, ಆರ್​.ಮುನಿಕೃಷ್ಣ, ಮಹೇಶ್​ ಕುಮಾರ್​, ಆನಂದ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net