ವೇಮಗಲ್: ವೇಮಗಲ್&ಕುರುಗಲ್ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಹಲವು ಮೂಲ ಸೌಕರ್ಯ ಹಾಗೂ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಸಲಹೆ, ಚರ್ಚೆಗಳು ನಡೆದವು.
ವೇಮಗಲ್ನಲ್ಲಿ ಚಥುಷ್ಪಥ ನಿರ್ಮಾಣವಾಗುತ್ತಿದ್ದೂ ಎಲ್ಲೂ ್ಲೆ$ ಓವರ್ ಬಾರದಂತೆ ರಸ್ತೆ ನಿರ್ಮಿಸಿ, ಸಂಜೆ ಡೇರಿಗೆ ಹಾಲು ಹಾಕಲು ಬರುವವರನ್ನು ಹೆಲ್ಮೆಟ್ ನೆಪದಲ್ಲಿ ಹಿಡಿದು ದಂಡ ವಿಧಿಸಬಾರದು ಎಂದು 6ನೇ ವಾರ್ಡ್ನ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್ ಸಭೆಗೆ ತಿಳಿಸಿದರು. problems
14ನೇ ವಾರ್ಡ್ ಸದಸ್ಯ ವಿ.ಎಂ.ನಾಗೇಶ್ ಮಾತನಾಡಿ, ಪಟ್ಟಣದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಗೆ ಜಾಗವಿಲ್ಲ, ಸರ್ವೇ ನಂ. 33ರಲ್ಲಿ 2 ಎಕರೆ ಗ್ರಾಂಟ್ ಆಗಿದ್ದು, ಪರಿಶೀಲಿಸಿ ಕಾಂಪೌಂಡ್ ನಿರ್ಮಿಸಿಕೊಡಬೇಕು. ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ಕೊರತೆ ನೀಗಿಸಿ ಪಕ್ಕದ ಹಾಸ್ಟೆಲ್ಗೆ ಸೌಕರ್ಯ ಒದಗಿಸಬೇಕು ಎಂದು ತಿಳಿಸಿದು ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ನಾರಾಯಣಸ್ವಾಮಿ 24 ಗಂಟೆಗಳ ಕಾಲ ವೈದ್ಯರು ಇರುವಂತೆ ಮಾಡುತ್ತೇವೆ ಎಂದು ತಿಳಿಸಿದರು.
9ನೇ ವಾರ್ಡ್ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಕುರುಗಲ್ ಗೇಟ್ನ ಸೈಟ್ಗಳಲ್ಲಿರುವವರಿಗೆ ಓವರ್ ಹೆಡ್ ಟ್ಯಾಂಕ್, ಬೋರ್ವೆಲ್, ರಸ್ತೆ, ಚರಂಡಿ ಮಾಡಿಕೊಡಬೇಕಿದೆ ಎಂದರು.
ನಾಮಿನಿ ಸದಸ್ಯ ಸನಾವುಲ್ಲ ಖಾನ್ ಮಾತನಾಡಿ, ವಿಶ್ವ ನಗರದಲ್ಲಿ ಆಂಜನೇಯ ಸ್ವಾಮಿ ಚಾವಣಿ ನಿರ್ಮಿಸುವಂತೆ ತಿಳಿಸಿದರೆ, ಸಿಂಗೇನಹಳ್ಳಿ ಬಳಿಯ ಮುರಾರ್ಜಿ ದೇಸಾಯಿ ಶಾಲೆಗೆ ರಸ್ತೆ ಹಾಗೂ ಸ್ಮಶಾನದ ಸಮಸ್ಯೆ ಕುರಿತು 12ನೇ ವಾರ್ಡ್ ಸದಸ್ಯ ಮುನಿರಾಜು ಗಮನಸೆಳೆದರು.ಬಸ್ ನಿಲ್ದಾಣದಲ್ಲಿರುವ ಅಂಗಡಿಗಳನ್ನು ತೆರವು ಮಾಡಿ ನಿಲ್ದಾಣ ಪ್ರಗತಿ ಮಾಡಬೇಕು ಎಂದು 5ನೇ ವಾರ್ಡಿನ ಸದಸ್ಯ ಲೋಕೇಶ್ ಮನವಿ ಮಾಡಿದರು.
1ನೇ ವಾರ್ಡಿನ ಸದಸ್ಯೆಅಂಜಲಿ ಪ್ರಕಾಶ್ ಮಾತನಾಡಿ, ಕುರುಬರಹಳ್ಳಿಯಲ್ಲಿ ಕೆಲವರಿಗೆ ಹಕ್ಕುಪತ್ರ ನೀಡದೆ ಖಾತೆ ಮಾಡಿಕೊಂಡಿದ್ದಾರೆ. ಅಂತಹವರಿಗೆ ಹಕ್ಕುಪತ್ರ ನೀಡಬೇಕಿದೆ. ಕನಕ ಭವನಕ್ಕೆ ಅನುದಾನ ಬೇಕಾಗಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರೇಟರ್ ಸಮಸ್ಯೆ ಇದ್ದು, ರಾತ್ರಿ ವೈದ್ಯರ ಕೊರತೆ ಕುರಿತು ಸದಸ್ಯೆ ಸುಜಾತಾ ಮುನಿರಾಜು ತಿಳಿಸಿದರು. 13ನೇ ವಾರ್ಡಿನ ಸದಸ್ಯೆ ಶಿಲ್ಪಾ ಶಿವಶಂಕರ್ ಮಾತನಾಡಿ, ಬಸ್ನಿಲ್ದಾಣ ವೃತ್ತದ ಸಿಗ್ನಲ್ ಬಳಿ ಒಬ್ಬ ಪೊಲೀಸರನ್ನು ನಿಯೋಜನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಅಪಘಾತ ಹೆಚ್ಚಾಗಿವೆ ಎಂದರು.
15ನೇ ವಾರ್ಡ್ ಸದಸ್ಯೆ ದೀಪಾ ವೆಂಕಟೇಶ್ ಮಾತನಾಡಿ, ಇತ್ತೀಚಿಗಷ್ಟೇ ವೇಮಗಲ್ನಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ಸಂಜೆಯ ಸಮಯದಲ್ಲಿ ಬೆಂಗಳೂರಿನಿಂದ ವೇಮಗಲ್ಗೆ ಬರುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
17ನೇ ವಾರ್ಡ್ ಸದಸ್ಯೆ ಶಶಿಕಲಾ ನಾಗೇಶ್ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ಅತಿ ಹೆಚ್ಚು ಕಡು ಬಡವರು ಇರುವ ವಾರ್ಡ್ ನಮ್ಮದಾಗಿದೆ. ಸೈಟ್, ನಿವೇಶನ ಸೇರಿಚರಂಡಿ, ಬೀದಿದೀಪ, ಸಿಸಿರೋಡ್ ಅಭಿವೃದ್ಧಿ ಕೆಲಸ ಮಾಡಲು ಶಾಸಕರು ಸಹಾಯ ಮಾಡಬೇಕು ಎಂದರು.
2ನೇ ವಾರ್ಡಿನ ಸದಸ್ಯ ರಾಮು ಮಾತನಾಡಿ, ಗ್ರಾಮದ ಬಳಿ ಜಲ್ಲಿ ಕ್ರಷರ್ನಿಂದ ಶಬ್ದ ಮಾಲಿನ್ಯವಾಗುತ್ತಿದೆ. ರಾತ್ರಿ ಸಮಯದಲ್ಲಿ ನಿದ್ದೆ ಮಾಡಲು ಆಗುತ್ತಿಲ್ಲ. ಲಾರಿಗಳಲ್ಲಿ ಓವರ್ ಲೋಡ್ ಹಾಕಿಕೊಂಡು ಹೋಗಿ ರಸ್ತೆಗಳನ್ನು ಹಾಳು ಮಾಡಿದ್ದಾರೆ ಎಂದರು.
20 ಕೋಟಿ ರೂ.ಅನುದಾನ: ಸಮಸ್ಯೆಗಳನ್ನೆಲ್ಲ ಆಲಿಸಿದ ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ತಿಂಗಳ ಒಳಗೆ 20 ಕೋಟಿ ರೂ. ಮತ್ತು ನಂತರದ ದಿನಗಳಲ್ಲಿ 50 ಕೋಟಿಗೂ ಹೆಚ್ಚು ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಚುನಾವಣೆಗಳು ಬಂದಾಗ ಪಕ್ಷ ನೋಡೋಣ. ಅಭಿವೃದ್ಧಿ ವಿಷಯ ಬಂದಾಗ ನಾವೆಲ್ಲ ಒಂದೇ. ನಮ್ಮೆಲ್ಲರ ಗುರಿ ಜನರಿಗೆ ಸೇವೆ ಮಾಡುವುದು ಎಂದರು. ಟಿಎಚ್ಒ ಡಾ.ಎ.ವಿ.ನಾರಾಯಣಸ್ವಾಮಿ, ಬೆಸ್ಕಾಂ ಇಲಾಖೆ ಎಇಇ ಬಸವರಾಜ್, ವೇಮಗಲ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಪಿಮಂಜು ಅವರನ್ನು ಕರೆಸಿ ಸಂಬಂಧಪಟ್ಟ ಸಮಸ್ಯೆ ತಿಳಿಸಿದರು.