ಅಪ್ಪಣ್ಣನವರ ವಚನ ಬದುಕಿಗೆ ದಾರಿದೀಪ

ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ- ಲಿಂಗಮ್ಮನವರ ಜಯಂತಿ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಶಂಭುಲಿಂಗ ಕಾಮಣ್ಣ, ಗುಂಡಪ್ಪ ಸಂಗಮಕರ್​, ಸಂತೋಷ ಹಡಪದ  ಇತರರಿದ್ದರು.
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ- ಲಿಂಗಮ್ಮನವರ ಜಯಂತಿ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಶಂಭುಲಿಂಗ ಕಾಮಣ್ಣ, ಗುಂಡಪ್ಪ ಸಂಗಮಕರ್​, ಸಂತೋಷ ಹಡಪದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುರುಬಸವ ಪಟ್ಟದ್ದೇವರು ಅಭಿಮತ
  • ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಜಯಂತಿ
ಭಾಲ್ಕಿ: ವಿಶ್ವಗುರು ಬಸವಣ್ಣನವರ ಅತ್ಯಂತ ಆತ್ಮೀಯ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರಾಗಿದ್ದರು. ಹಡಪದ ಅಪ್ಪಣ್ಣನವರು ಬಸವಣ್ಣನವರ ನೆರಳಾಗಿ ಬಾಳಿದರು. ಅವರ ಆಪ್ತರಾಗಿ ಅವರೆಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ 501ನೆಯ ಮಾಸಿಕ ಶಿವಾನುಭವಗೋಷ್ಠಿ ಮತ್ತು ಹಡಪದ ಅಪ್ಪಣ್ಣ-ಲಿಂಗಮ್ಮನವರ ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಇಂದಿನ ಭಾಷೆಯಲ್ಲಿ ಹೇಳಬೇಕಾದರೆ ಬಸವಣ್ಣನವರ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರು ಕಾರ್ಯನಿರ್ವಹಿಸಿದರು. ಶರಣ ಚರಿತ್ರೆಯ ಅನೇಕ ಪ್ರಸಂಗಗಳಲ್ಲಿ ಹಡಪದ ಅಪ್ಪಣ್ಣನವರ ಉಲ್ಲೇಖ ದೊರೆಯುತ್ತದೆ. ಹಡಪದ ಅಪ್ಪಣ್ಣ-ಲಿಂಗಮ್ಮ ಅಪರೂಪದ ದಂಪತಿಗಳಾಗಿ ಅನುಭವ ಮಂಟಪದಲ್ಲಿ ಅನುಭಾವವನ್ನು ಪಡೆದು ಶ್ರೇಷ್ಠ ಶಿವಯೋಗಿಗಳು ಆಗಿದ್ದರು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಅನುಭಾವ ನೀಡಿದರು. ತಾಲೂಕು ವಚನ ಸಾಹಿತ್ಯ ಪರಿಷತ್​ ಅಧ್ಯಕ್ಷ ಗುಂಡಪ್ಪ ಸಂಗಮಕರ್​ಅಧ್ಯಕ್ಷತೆ ವಹಿಸಿದ್ದರು. ರಮೇಶ ಕುರುಬಖೇಳಗಿ ಇತರರಿದ್ದರು. ನೀಲಾಂಬಿಕಾ ಪ್ರಕಾಶ ಹಡಪದ ಬಸವಗುರು ಪೂಜೆ ನೆರವೇರಿಸಿದರು. ಶ್ರೀದೇವಿ ಶಾಂತಯ್ಯ ಸ್ವಾಮಿ ಹಾಗೂ ಡಾ.ಬಸವಜ್ಯೋತಿ ಗುಂಡಪ್ಪ ಸಂಗಮಕರ್​ ವಚನ ಸಂಗೀತ ನಡೆಸಿಕೊಟ್ಟರು. ಕು.ಸುಮಿತ ಬೀರಪ್ಪ ಪೂಜಾರಿ ಹಾಗೂ ವೀರೇಶ ಶಿವರಾಜ ನಿಂಬೂರೆ ಮಾತನಾಡಿದರು. ಅಕ್ಕಬಳಗದ ಶರಣೆಯರಿಂದ ವಚನ ಭಜನೆ ನಡೆಯಿತು. ಸುಗಂದಬಾಯಿ ಗೋವಿಂದರಾವ ಹಡಪದ ಅವರಿಂದ ಭಕ್ತಿ ದಾಸೋಹ ನಡೆಯಿತು. ಸಂತೋಷ ಹಡಪದ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net