ಸಮಾಜ ಸುಧಾರಣೆಗೆ ಅಪ್ಪಣ್ಣ ಕೊಡುಗೆ ಅಪಾರ

ಹುಣಸಗಿ ತಾಲೂಕಿನ ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ಮುಖ್ಯಗುರು ಸಂಗಯ್ಯ ಬಾಚಿಹಾಳ, ರೇಣುಕಾ ವಾಲಿ ಇತರರಿದ್ದರು.
ಹುಣಸಗಿ ತಾಲೂಕಿನ ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ಮುಖ್ಯಗುರು ಸಂಗಯ್ಯ ಬಾಚಿಹಾಳ, ರೇಣುಕಾ ವಾಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಎಂ.ಬಸವರಾಜ ಅಭಿಮತ
  • ಹುಣಸಗಿ ತಾಲೂಕಿನ ವಿವಿಧೆಡೆ ಜಯಂತಿ ಆಚರಣೆ
ಹುಣಸಗಿ : ಸಮಾಜ ಸುಧಾರಣೆಯಲ್ಲಿ ಹಡಪದ ಅಪ್ಪಣ್ಣ ಅವರ ಕೊಡುಗೆ ಅಪಾರವಾಗಿದೆ ಎಂದು ತಹಸೀಲ್ದಾರ್ ಎಂ. ಬಸವರಾಜ ಹೇಳಿದರು.
ಇಲ್ಲಿನ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡ ೮೯೨ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪ್ಪಣ್ಣ ಅವರ ಜೀವನ, ವಚನ ಸಾಹಿತ್ಯ ಮತ್ತು ಸಮಾಜ ಸುಧಾರಣೆಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದು, ಸಮಾನತೆ, ಶ್ರಮದ ಗೌರವ, ಮಾನವೀಯತೆ ಮತ್ತು ಸತ್ಯದ ಮಾರ್ಗವನ್ನು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಾರಿದ ಮಹಾನ್ ಶರಣರಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಅವರ ಆದರ್ಶಗಳು ಇಂದಿನ ಯುವ ಜನತೆಗೆ ದಾರಿದೀಪವಾಗಿವೆ ಎಂದರು. ಈ ವೇಳೆ ಅಶೋಕ ರಾಜನಕೋಳೂರು, ಮಲ್ಲಿಕಾರ್ಜುನ ಹಡಪದ, ಶರಣಪ್ಪ ಇತರರಿದ್ದರು.
ಬೂದಿಹಾಳ ಶಾಲೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ಮುಖ್ಯಗುರು ಸಂಗಯ್ಯ ಬಾಚಿಹಾಳ ಮಾತನಾಡಿ, ಹಡಪದ ಅಪ್ಪಣ್ಣನ ಅವರು ತಮ್ಮ ವಚನಗಳ ಮೂಲಕ ಶ್ರಮದ ಮಹತ್ವ, ಸಮಾನತೆ, ಸತ್ಯ ಮತ್ತು ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತಿದ ಮಹಾನ್ ಸಮಾಜ ಸುಧಾರಕರಾಗಿದ್ದರು. ಅವರ ಆದರ್ಶಗಳು ಇಂದಿಗೂ ಪ್ರಸ್ತತವಾಗಿವೆ ಎಂದರು. ಈ ವೇಳೆ ರೇಣುಕಾ ವಾಲಿ, ಲಕ್ಷ್ಮೀ, ವಿದ್ಯಾವತಿ, ಸಾವಿತ್ರಿ, ರವಿ, ನೀಲಮ್ಮ, ವಿಜಯಲಕ್ಷ್ಮೀ, ರೂಪಾ, ಬಸ್ಸಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net