ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಸಹಕಾರ ಸಂಘಗಳ ನೋಂದಣಾಧಿಕಾರಿ ಎಕ್ಸ್ಆಫೀಶಿಯೊ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಅಡಿಯಲ್ಲಿ ಸರ್ಕಾರಕ್ಕೆ ಬ್ಯಾಂಕಿನ ದಾಖಲೆಗಳನ್ನು ಪರಿಶೀಲಿಸುವುದು, ತನಿಖೆ ನಡೆಸುವುದು ಮತ್ತು ಆಡಿಟ್ ಮಾಡಲು ಆದೇಶಿಸುವ ಅಧಿಕಾರವಿದೆ ಎಂದು ಆಯೋಗ ತಿಳಿಸಿದೆ.